ಲೋಕಾಪುರ ಪಟ್ಟಣದಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಶಿಬಿರ ಕುರಿತು ಎಂ.ಎA. ಜೋಶಿ ಆಸ್ಪತ್ರೆ ಆಡಳಿತಾಽಕಾರಿ ಸಂಜೀವ ಕುಲಕರ್ಣಿ ಶಿಬಿರ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಮುಧೋಳ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಬಿರಾದಾರ, ಡಾ. ಬಸವರಾಜ ಹಿರೇಮಠ, ಲಯನ್ ಕೆ.ವಿ. ಪಾಟೀಲ, ಪ್ರೊ. ಎ.ಐ. ಗಂಗಣ್ಣವರ, ಡಾ. ಬಸವರಾಜ ಹಿರೇಮಠ, ಡಾ. ಸಂತೋಷ ಶೆಟ್ಟರ, ಚಿನ್ಮಯ ಉದಪುಡಿ ಇನ್ನಿತರರಿದ್ದರು. 
ವಿಜಯಪುರ

ಉಚಿತ ನೇತ್ರ ತಪಾಸಣೆ ಶಿಬಿರ

ಲೋಕಾಪುರ: ದೃಷ್ಟಿ ದೋಷ ಇರುವಂತಹ ಗ್ರಾಮೀಣ ಭಾಗದ ಜನತೆಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸö ಚಿಕಿತ್ಸಾ ಶಿಬಿರ ಡಿ. 7ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎಂ. ಜೋಶಿ ಆಸ್ಪತ್ರೆ ಆಡಳಿತಾಽಕಾರಿ ಸಂಜೀವ ಕುಲಕರ್ಣಿ ಹೇಳಿದರು.
ಪಟ್ಟಣದ ಉದಪುಡಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಎಸ್‌ಜಿಎಂಐ ನೇತ್ರ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆ, ಲಯನ್ಸ್ ಕ್ಲಬ್, ಮುಧೋಳ, ಎಂ.ಎA. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಶಿಬಿರ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಧೋಳ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಬಿರಾದಾರ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಉದ್ಘಾಟಿಸಲಿದ್ದಾರೆ. ಎಂ.ಎಂ. ಜೋಶಿ ಆಸ್ಪತ್ರೆ ಆಡಳಿತಾಽಕಾರಿ ಸಂಜೀವ ಕುಲಕರ್ಣಿ, ಲಯನ್ ಕ್ಲಬ್ ಕಾರ್ಯದರ್ಶಿ ರಾಜಶೇಖರ ಗೋಸಾರ, ಖಜಾಂಚಿ ಶಿವಾನಂದ ಕಲ್ಯಾಣಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಡಾ. ಬಸವರಾಜ ಹಿರೇಮಠ ಮಾತನಾಡಿ, 40 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು, ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸಾ ಶಿಬಿರ ಲೋಕಾಪುರ ಪಟ್ಟಣದಲ್ಲಿ ಆಯೋಜಿಸುವ ಮೂಲಕ ಉತ್ತಮ ಸಾಮಾಜಿಕ ಸೇವಾ ಕಾರ್ಯ ಮಾಡಿದ್ದಾರೆ ಎಂದರು.
ಲಯನ್ ಕೆ.ವಿ. ಪಾಟೀಲ, ಪ್ರೊ. ಎ.ಐ. ಗಂಗಣ್ಣವರ, ಡಾ. ಬಸವರಾಜ ಹಿರೇಮಠ, ಡಾ. ಸಂತೋಷ ಶೆಟ್ಟರ, ಚಿನ್ಮಯ ಉದಪುಡಿ ಇನ್ನಿತರರಿದ್ದರು.