ಬಬಲೇಶ್ವರ ತಾಲೂಕಿನ ಕೃಷ್ಣ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬಿನ ದರ ಹಾಗೂ ಕಾರ್ಖಾನೆ ಅಭಿವೃದ್ಧಿ ವಿಷಯ ಚರ್ಚೆಗೆ ಸಭೆ ನಡೆಯಿತು. ಕುಮಾರ ಚಂದ್ರಕಾAತ ದೇಸಾಯಿ, ಗಿರೀಶ ಚಂದಪ್ಪ ಕೊರಡ್ಡಿ ಇತರರಿದ್ದಾರೆ. 
ವಿಜಯಪುರ

ಟನ್ ಕಬ್ಬಿಗೆ ಪ್ರಥಮ ಕಂತಿನಲ್ಲಿ 3175 ರೂ. ಪಾವತಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಹೇಳಿಕೆ
  • ಕಬ್ಬಿನ ದರ, ಕಾರ್ಖಾನೆ ಅಭಿವೃದ್ಧಿ ಸಭೆ
ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರಥಮ ಕಂತಿನಲ್ಲಿ ಪ್ರತಿ ಟನ್‌ಗೆ 3175 ರೂ. ಹಾಗೂ ರಾಜ್ಯ ಸರ್ಕಾರದ ಘೋಷಿಸಿದ ಕಬ್ಬಿನ ಪ್ರೋತ್ಸಾಹ ಧನ 50 ರೂ. ನೀಡುವ ಸಮಯದಲ್ಲಿ ಕಾರ್ಖಾನೆಯಿಂದಲೂ ಮತ್ತೆ 50 ರೂ. ಸೇರಿಸಿ ಪಾವತಿಸಲಾಗುವುದು ಎಂದು ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ತಿಳಿಸಿದರು.
ಬಬಲೇಶ್ವರ ತಾಲೂಕಿನ ಕೃಷ್ಣ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಬ್ಬಿನ ದರ ಹಾಗೂ ಕಾರ್ಖಾನೆ ಅಭಿವೃದ್ಧಿ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.
ಪ್ರಗತಿಪರ ರೈತ, ಕೆಎಂಎಫ್‌ ಮಾಜಿ ಅಧ್ಯಕ್ಷ ಗಿರೀಶ ಚಂದಪ್ಪ ಕೊರಡ್ಡಿ ಮಾತನಾಡಿ, ರೈತರ ವಿವಿಧ ಸಮಸ್ಯೆಗಳ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಯುವ ಹಂಗಾಮಿಗೆ ಕಾರ್ಖಾನೆಗೆ ಪೂರೈಕೆ ಆಗುತ್ತಿರುವ ಕಬ್ಬಿನ ಬೆಲೆ ನಿಗದಿಪಡಿಸುವ ಕುರಿತು ಚರ್ಚೆ ನಡೆಸಿದರು.
ಪ್ರಗತಿಪರ ರೈತ ಹನುಮಂತ ಹರನಟ್ಟಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾರ್ಖಾನೆ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಹಾಗೂ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಭಾಗವಹಿಸಿದ್ದರು.