ವಿಜಯಪುರದ ಎಸ್‌ಬಿಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶ್ರೀಪಾದ ಜೋಶಿ, ವಿ.ಎನ್. ಕೆಂಗನಾಳ, ಅನೀಲ ಅಬಲಾಪೂರ ಮತ್ತಿತರರಿದ್ದಾರೆ. 
ವಿಜಯಪುರ

ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ವಿಜಯಪುರ : ನಗರದ ಮಾರ್ಗದರ್ಶಿ ಸಮೂಹ ಸಂಸ್ಥೆಯ ಎಸ್‌ಬಿಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ 2025-26ನೇ ಶೈಕ್ಷಣಿಕ ವರ್ಷದ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಸಂಭ್ರಮದಿAದ ನಡೆಯಿತು.
ಮುಖ್ಯ ಅತಿಥಿ ಸಿಕ್ಯಾಬ್ ಮಹಿಳಾ ಪ.ಪೂ. ಕಾಲೇಜಿನ ಹಿರಿಯ ಉಪನ್ಯಾಸಕ ಯು.ಎನ್. ಕುಂಟೋಜಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಉಪಯುಕ್ತ ಮಾರ್ಗದರ್ಶನ ನೀಡಿ, ಶುಭ ಹಾರೈಸಿದರು. ಶಿಕ್ಷಣ ಪ್ರೇಮಿ ಶ್ರೀಪಾದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ವಿ.ಎನ್. ಕೆಂಗನಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಅನೀಲ ಅಬಲಾಪೂರ, ವಿದ್ಯಾರ್ಥಿ ಪ್ರತಿನಿಽಗಳಾದ ರಿಯಾಜ್ ಕಲಿಗಾರ, ರೇಣುಕಾ ಹೇಳವಾರ, ಉಪನ್ಯಾಸಕರಾದ ಮಾಳಪ್ಪ ಸಿದ್ನಾತ, ಎನ್.ಸಿ. ಮುದ್ದೇಬಿಹಾಳ, ಜಿ.ಡಿ. ಹಿರೇಮಠ, ಸೌಮ್ಯಾ ಪಾಟೀಲ, ಮಧು ಹತ್ತಿ, ಗುರುದೇವಿ ಪತ್ತಾರ, ಭಾಗ್ಯಾ ಹಿರೇಮಠ, ಲಕ್ಷಿ÷್ಮÃ ದೇವರಕರ, ಮಾಲಾಶ್ರೀ ಕನ್ನಾಳ, ಭಾಸ್ಕರ ಕುಲಕರ್ಣಿ ಮತ್ತಿತರರಿದ್ದರು.