ಬಸವನಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಮತ್ತು ಮೋಜಿನ ಆಟಗಳ ಮುಕ್ತಾಯ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ವಿವೇಕಾನಂದ ಕಲ್ಯಾಣಶೆಟ್ಟಿ, ಪ್ರಾಚಾರ್ಯ ಡಾ.ಎ.ವಿ. ಸೂರ್ಯವಂಶ, ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಇದ್ದರು.
ಬಸವನಬಾಗೇವಾಡಿ: ವಿಜ್ಞಾನ ಎಷ್ಟೇ ಮುಂದುವರೆದರೂ ದೇವರ ಮೇಲಿನ ಭಕ್ತಿ ಕಡಿಮೆಯಾಗಿಲ್ಲ. ಮೈಲಾಪುರ ಮೈಲಾರಲಿಂಗೇಶ್ವರನ ಕ್ಷೇತ್ರದ ಜನರು ಕೋಳಿ ಸಾಕಾಣಿಕೆ ಮಾಡಲ್ಲ, ಕುದುರೆ ಹತ್ತುವುದಿಲ್ಲ.
ಬಾಣಂತಿಯರು ಮಂಚ ಬಳಸುವುದಿಲ್ಲ. ಇಲ್ಲಿನ ಜನರ ಜೀವನ ಶೈಲಿ ವಿಜ್ಞಾನಕ್ಕೆ ಸವಾಲಾಗಿದೆ. ನಮ್ಮ ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ಕೈ ಬಿಡುವುದಿಲ್ಲ, ನಂಬಿದ ಭಗವಂತ ನಮಗೆ ದಾರಿ ತೋರಿಸುತ್ತಾನೆ ಎಂದು ಸಾಹಿತಿ ಶಾಂತಾ ಬಿರಾದಾರ ಹೇಳಿದರು.
ಗುರುವಾರ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಜಾನಪದ ಉತ್ಸವ ಮತ್ತು ಮೋಜಿನ ಆಟಗಳ ಮುಕ್ತಾಯ ಸಮಾರಂಭ ಹಾಗೂ ಕಸ್ತೂರಿ ಬೆಣ್ಣೂರ, ದಿ.ಮಲ್ಲಮ್ಮಗೌಡತಿ ಪಾಟೀಲ, ಸಿದ್ಧಪ್ಪ ಹಂಚಲಿ ಸ್ಮರಣಾರ್ಥ ಯಾದಗಿರಿ ಮೈಲಾರಲಿಂಗೇಶ್ವರನ ಚರಿತ್ರೆ ಹಾಗೂ ಶರಣರ ಚಿಂತನೆಗಳು ಹಾಗೂ ಸಾಮಾಜಿಕ ಮೌಲ್ಯಗಳು ದತ್ತಿನಿಽ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆ ಕಲಿತ ವ್ಯಕ್ತಿ ಭ್ರಷ್ಟನಾಗಬಹುದು ಆದರೆ ಸಂಸ್ಕಾರವAತ ವ್ಯಕ್ತಿ ಯಾವಾಗಲೂ ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ ಎಂದರು.
ಡಾ. ಸುಜಾತಾ ಝಳಕಿ ಮಾತನಾಡಿ, ಶಿವ ಶರಣರು ಸಮಾಜದಲ್ಲಿ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿ, ಸ್ವಚ್ಛ ಸಮಾಜ ನಿರ್ಮಿಸಿದ್ದಾರೆ. ಅವರ ಆಚಾರ, ವಿಚಾರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆ ಸಂಸ್ಥೆಯ ಪ್ರಾಚಾರ್ಯ ಡಾ.ಎ.ವಿ. ಸೂರ್ಯವಂಶ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ಶಿವಾನಂದ ಡೊಣ್ಣೂರು, ಸಾಹಿತಿ ಅಶೋಕ ಹಂಚಲಿ, ಕೆವಿಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಈರಣ್ಣಗೌಡ ಪಾಟೀಲ, ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘದ ಜಿಲ್ಲಾಧ್ಯಕ್ಷ ಯಮನಪ್ಪ ಅಂಗನಗೇರಿ, ಶಿಕ್ಷಕ ಸಿ.ಪಿ.ದಡ್ಡೆಕರ ಮತ್ತಿತರರಿದ್ದರು.
ಕಾವೇರಿ ಅಡಗಿಮನಿ ನಿರೂಪಿಸಿದರು, ಯನಮಪ್ಪ ಮಿಣಜಿಗಿ ಸ್ವಾಗತಿಸಿ, ಜ್ಯೋತಿ ಕುಂಬಾರ ವಂದಿಸಿದರು.