ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಅಹಲ್ಯಾದೇವಿ ಹೋಳ್ಕರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಡಂಗುರ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗಲಕ್ಷಿ÷್ಮÃ ಚೌಧರಿ, ಉಮೇಶ ಮೇಟಿ, ಸೋಮನಾಥ ಕಳ್ಳಿಮನಿ ಮತ್ತಿತರರಿದ್ದಾರೆ.
ವಿಜಯಪುರ: ಸಮಾಜ ಮತ್ತು ಭವ್ಯ ಭಾರತವನ್ನು ಮುನ್ನಡೆಸುವ ಆಗಾಧ ಶಕ್ತಿ ಯುವ ಜನತೆಯಲ್ಲಿ ಅಡಗಿದೆ.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಅವರಿಗೆ ಬೇಕಾದ ಅಗತ್ಯ ಬೆಂಬಲ ನೀಡಬೇಕು. ಶಿಕ್ಷಣವೇ ಸಮಾಜದ ಪ್ರಗತಿಯ ಮೊದಲ ಮೆಟ್ಟಿಲಾ
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಅಹಲ್ಯಾದೇವಿ ಹೋಳ್ಕರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯತೀಂದ್ರ ಸಿದ್ದರಾಮಯ್ಯ, ನಾಗಲಕ್ಷಿ÷್ಮÃ ಚೌಧರಿ, ಉಮೇಶ ಮೇಟಿ, ಸೋಮನಾಥ ಕಳ್ಳಿಮನಿ ಮತ್ತಿತರರಿದ್ದಾರೆ. ಗಿದ್ದು, ಸಮುದಾಯದವರು ಶಿಕ್ಷಣದ ಜತೆಗೆ ಸಂಘಟಿತರಾಗಬೇಕು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಜಿಲ್ಲಾ ಕುರುಬ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಹಲ್ಯಾದೇವಿ ಹೋಳ್ಕರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ, ಕಾರ್ಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿಯೂ ಸಹ ಪ್ರಮುಖ ಹುz್ದೆಗಳಲ್ಲಿ ಅಹಿಂದ ಸಮಾಜದವರ ಸಂಖ್ಯೆ ಕಡಿಮೆ ಇದೆ. ಅಲ್ಲಿಯೂ ಸಹ ಅವರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಯತೀಂದ್ರ, ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇದುವರೆಗೂ ಸಮಾನತೆ ಸಂಪೂರ್ಣವಾಗಿ ಬಂದಿಲ್ಲ, ಇಂದಿಗೂ ಅನೇಕ ಶೋಷಿತ, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ÷್ಮÃ ಚೌಧರಿ ಮಾತನಾಡಿ, ಇಡೀ ದೇಶದಲ್ಲಿ ಯಾವುದಾದರು ದೊಡ್ಡ ಮಹಾರಾಣಿಯನ್ನು ನೆನಪಿಟ್ಟುಕೊಂಡಿರುವುದಿದ್ದರೆ ಅದು ಅಹಲ್ಯಾದೇವಿ ಹೊಳ್ಕರ ಅವರನ್ನು ಮಾತ್ರ.
ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳುತ್ತಿದ್ದಂತೆ ಯಾವುದೇ ಸಮಾಜ ಮುಂದುವರಿಯಬೇಕಾದರೆ ಆ ಸಮಾಜದ ಹೆಣ್ಣು ಮಗಳು ಬೆಳೆಯಬೇಕು ಅಂದಾಗ ಮಾತ್ರ ಆ ಸಮಾಜ ಬೆಳೆಯಲು ಸಾಧ್ಯ. ರಾಜಕೀಯ ಪ್ರಗತೀಯ ಬೀಜ ಎಂದು ಅವರು ಹೇಳಿz್ದÁರೆ. ಸಮಾಜದ ಪ್ರಗತಿಯಾಗುವುದು ರಾಜಕೀಯದಿಂದ ಮಾತ್ರ ಎಂದರು.
ಗೊಳಸಾರದ ಅಭಿನವ ಪುಂಡಲಿAಗ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಾಗಲಕೋಟೆ ಶಾಸಕ ಉಮೇಶ ಮೇಟಿ, ಮೇಯರ್ ಎಂ.ಎಸ್. ಕರಡಿ, ಜಿ.ಬಿ. ವಿನಯಕುಮಾರ, ಚಂದ್ರಶೇಖರ ನುಗ್ಗಲಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪುಂಡಲಿಕ ಮಾನವರ, ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಬಸವರಾಜ ಲಕ್ಕಣ್ಣವರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮತ್ತಿತರರಿದ್ದರು.