2026-27 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ -Àಸಲ್ ಬಿಮಾ ಯೋಜನೆಗೆ ಸರ್ಕಾರ ಅಽಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ ಎಂದು ಜಿಲ್ಲಾಽಕಾರಿ
ವಿಜಯಪುರ: 2026-27 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ -Àಸಲ್ ಬಿಮಾ ಯೋಜನೆಗೆ ಸರ್ಕಾರ ಅಽಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ ಎಂದು ಜಿಲ್ಲಾಽಕಾರಿ ಡಾ.ಆನಂದ ಕೆ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಽಕಾರಿಗಳು, ತಾಲೂಕುವಾರು ಹಾಗೂ ಗ್ರಾಮ ಪಂಚಾಯಿತಿವಾರು ಅಽಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ, ವಿಮಾ ಕಂತು ಮತ್ತು ನೋಂದಣಿಯ ಅಂತಿಮ ದಿನಾಂಕದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು, ಸಾಲ ನೀಡಿದ ಬ್ಯಾಂಕ್‌ಗಳಲ್ಲಿ ವಿಮೆ ನೋಂದಾಯಿಸಬೇಕು. ಜತೆಗೆ ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿ ಜತೆ ಕೃಷಿ ಸಾಲ ಪಡೆಯದಿರುವ ಕುರಿತು ಕಡ್ಡಾಯವಾಗಿ ಸ್ವಯಂ ಘೋಷಣೆ ಪತ್ರ ಲಗತ್ತಿಸಬೇಕು.
ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಸಂಖ್ಯೆಯೊAದಿಗೆ ಡಿಸಿಸಿ/ಇತರೆ ಬ್ಯಾಂಕ್, ಗ್ರಾಮ್ ಒನ್ ಮತ್ತು ಸಿಎಸ್‌ಸಿ ಕೇಂದ್ರಳಿಗೆ ಸಂಪರ್ಕಿಸಬಬಹುದಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳು (ತೊಗರಿ ಮಳೆಯಾಶ್ರಿತ), ತೊಗರಿ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಸಜ್ಜೆ (ಮಳೆಯಾ±ರಿತ) ವಿಮಾ ಕಂತನ್ನು ಜು.31ರೊಳಗಾಗಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.
*ಹೋಬಳಿ ಮಟ್ಟಕ್ಕೆ ಬೆಳೆಗಳು: ಈರುಳ್ಳಿ (ನೀರು) ಹಾಗೂ ಹತ್ತಿ (ಮಳೆ ಆಶ್ರಿತ) ಬೆಳೆಗಳಿಗೆ ವಿಮೆ ಕಂತನ್ನು ಆ. 14 ರೊಳಗಾಗಿ ತುಂಬಬಹುದಾದರೆ, ಇನ್ನುಳಿದ ಬೆಳೆಗಳಿಗೆ ಜು.31ರೊಳಗಾಗಿ ವಿಮಾ ಕಂತು ತುಂಬಬೇಕು. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಎ-ïಐಡಿ ಹೊಂದಿರಬೇಕು ಎಂದು ಜಿಲ್ಲಾಽಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.