ಇಂಗಳೇಶ್ವರದಿAದ ಬೊಮ್ಮನಹಳ್ಳಿ ಡೋಣೂರ ಹಾಗೂ ಬಿಸನಾಳ ಹೋಗುವ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಇಂಗಳೇಶ್ವರ ಗ್ರಾಮದ ರೈತರು ವಿಜಯಪುರದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್. ಪೊಲೀಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸಿದ್ರಾಮಪ್ಪ ಎಮ್ಮಿ, ಸಿದ್ದಪ್ಪ ಜಕ್ಕೆನವರ ಮತ್ತಿತರರಿದ್ದಾರೆ.
ವಿಜಯಪುರ: ಇಂಗಳೇಶ್ವರದಿAದ ಬೊಮ್ಮನಹಳ್ಳಿ ಡೋಣೂರ ಹಾಗೂ ಬಿಸನಾಳಕ್ಕೆ ಹೋಗುವ ರಸ್ತೆಯನ್ನು ದುರಸ್ತಿಗೊಳಿಸಿ, ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ರೈತರು ಸೋಮವಾರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್. ಪೊಲೀಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರದಿAದ ಬೊಮ್ಮನಹಳ್ಳಿವರೆಗೆ ಹೋಗುವ ಹಾಗೂ ಡೋಣೂರ ಹಾಗೂ ಬಿಸನಾಳ ಸಂಪರ್ಕ ರಸ್ತೆ ಇದ್ದು, ಇದೇ ರಸ್ತೆಯನ್ನು ಅನುಸರಿಕೊಂಡು ನೂರಾರು ರೈತರು ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಸದರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಸಾಕಷ್ಟು ಮುಳ್ಳುಕಂಟಿಗಳು ಬೆಳೆದು ರೈತರು ತಮ್ಮ ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿಸಿದರು.
ಮಳೆಗಾಲ ಬಂದರೆ ಸದರಿ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಅದರಿಂದ ರೈತರು ಜಮೀನುಗಳಿಗೆ ಹೊಗಲು ಆಗದೆ ಕೃಷಿ ಚಟುವಟಿಕೆಗಳಿಗೆ ಕೂಡ ತೊಂದರೆಯಾಗಿದೆ. ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ರಿಪೇರಿಗೊಳಿಸಿ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್. ಪೊಲೀಸ್ ಪಾಟೀಲ ಮಾತನಾಡಿ, ೧೫ ದಿನಗಳಲ್ಲಿ ದಾರಿ ದುರಸ್ತಿಗೊಳಿಸಿ, ದಾರಿಗುಂಟ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರಾದ ಸಿದ್ರಾಮಪ್ಪ ಎಮ್ಮಿ, ಸಿದ್ದಪ್ಪ ಜಕ್ಕೆನವರ, ಶ್ರೀಧರ ಮಠ, ಜಗದೀಶ ತಕ್ಕೋಡ, ಮುರಿಗೆಪ್ಪ ತಾಳಿಕೋಟಿ, ಶ್ರೀಶೈಲ ಅವಟಿ, ಶ್ರೀಶೈಲ ತಾಳಿಕೋಟಿ, ಶರಣಪ್ಪ ಹಂಡಿ, ನಿಂಗಪ್ಪ ಸಜ್ಜನ, ವಿಠ್ಠಪ್ಪ ಕುಂಬಾರ, ಸಿದ್ದಲಿಂಗಪ್ಪ ಮನಹಳ್ಳಿ, ಗುರಪ್ಪ ಕಾಳಗಿ, ಬಸಗೊಂಡಪ್ಪ ಡಿಗ್ಗಾವಿ, ಅಕ್ಷಯ ತಾಳಿಕೋಟಿ, ಮಲ್ಲನಗೌಡ ಪಾಟೀಲ ಮತ್ತಿತರರಿದ್ದರು.