ಹಬೀಬ ನಗರವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಒತ್ತಾಯಿಸಿ ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ವತಿಯಿಂದ ವಿಜಯಪುರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಇಲಾಖೆ ಕಚೇರಿಗೆ ಮನವಿ ಸಲ್ಲಿಸಲಾಯಿತು. ಮುತ್ತು ಭೋವಿ, ಮೀನಾಕ್ಷಿ ಕಾಲೇಬಾಗ, ಅಕ್ರಂ ಮಾಶ್ಯಾಳಕರ, ಸಿಸ್ಟರ್ ಅಸುಂತಾ ಮತ್ತಿತರರಿದ್ದಾರೆ. 
ವಿಜಯಪುರ

ಹಬೀಬ ನಗರ ಕಂದಾಯ ಗ್ರಾಮವಾಗಿಸಲು ಆಗ್ರಹ

ವಿಜಯಪುರ: ಮಹಾನಗರ ಪಾಲಿಕೆಯ ವಾರ್ಡ್ ನಂ. 33 ವ್ಯಾಪ್ತಿಯ ಹಬೀಬ ನಗರವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಒತ್ತಾಯಿಸಿ ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಹಬೀಬ ನಗರ ನಿವಾಸಿಗಳು ಸೋಮವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಸಮಿತಿ ಅಧ್ಯಕ್ಷ ಮುತ್ತು ಭೋವಿ ಮಾತನಾಡಿ, ಹಬೀಬ ನಗರ ಕರ್ನಾಟಕ ಕೊಳಗೇರಿ ಅಭಿವೃಽ ಮಂಡಳಿ ಕಾಯಿದೆ ಅಡಿ ಸ್ಲಂ ಎಂದು ಘೋಷಿಸುವಂತೆ 2011ರಲ್ಲಿಯೇ ಅಲ್ಲಿನ ನೂರಾರು ಜನರು ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಹಲವು ಬಾರಿ ಕಾರ್ಯನಿರ್ವಾಹಕ ಅಭಿಯಂತರರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದಾಗಲೂ ಕೂಡ ಬರೀ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ದೂರಿದರು.
ಇಂಥದ್ದೇ ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಲ್ಲಿನ ಆನಂದ ನಗರ ರಸ್ತೆಯಲ್ಲಿರುವ ಚಂದನ ಕಾಲನಿಯನ್ನು ಕಂದಾಯ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸ್ಥಳೀಯರು ಮನವಿ ಸಲ್ಲಿಸಿದಾಗ ಪಾಲಿಕೆಯಲ್ಲಿ ಬರುವ ಚಂದನ ನಗರವನ್ನು ಕಂದಾಯ ಗ್ರಾಮನ್ನಾಗಿ ಮಾಡಲಾಗಿದೆ ಎಂದರು.
ಹೀಗಾಗಿ, ಮಹಾನಗರ ಪಾಲಿಕೆಯ ವಾಡ್ ನಂ. 33 ವ್ಯಾಪ್ತಿಯ ಹಬೀಬ ನಗರವನ್ನು ಕಂದಾಯ ನಗರವನ್ನಾಗಿ ಮಾಡುವಂತೆ ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಽಕಾರಿಗಳಾದ ಮಿನಾಕ್ಷಿ ಚೂರಿ ಮತ್ತು ಪ್ರಲ್ಲಾದ ಮನವಿ ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಒಕ್ಕೂಟದ ಪದಾಽಕಾರಿಗಳಾದ ಮಿನಾಕ್ಷಿ ಕಾಲೇಬಾಗ, ಅಕ್ರಂ ಮಾಶ್ಯಾಳಕರ, ಸಿಸ್ಟರ್ ಅಸುಂತಾ, ನಿವಾಸಿಗಳಾದ ಶಕೀಲಾ ಕೆರೂರ, ಜಯವಂತ ಕಾರಜೋಳ, ಲಕ್ಷಿ÷್ಮ ಮೂಲಿಮನಿ, ಶಮಶಾದ ನತ್ತರಸಾ, ಅಮಿರಬಿ ಪಟೇಲ, ಕಸ್ತೂರಿ ಬಿರೋಣಗಿ, ರಮೀಜಾ ನಿಡಗುಂದಿ, ಶೋಭಾ ವಾಲಿಕಾರ, ಮಿನಾಕ್ಷಿ ಸಿಂಗೆ, ರೇಣುಕಾ ಕೊಟ್ಯಾಳ, ಮಹಾದೇವಿ ಮೂಲಿಮನಿ ಮತ್ತಿತರರಿದ್ದರು.