ವಿಜಯಪುರದ ಕಿತ್ತೂರು ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಡಾ. ಆನಂದ ಕೆ. ರಿಷಿ ಆನಂದ, ಎಂ.ಎಸ್. ಕರಡಿ ಮತ್ತಿತರರಿದ್ದಾರೆ.
ವಿಜಯಪುರ: ರಸಗೊಬ್ಬರ ದರ ಕಡಿಮೆ ಮಾಡುವುದು, ಕೃಷಿ ಚಟುವಟಿಕೆಗಳಿಗೆ ಡಿಸೇಲ್ ಕೊರತೆಯಾಗದಂತೆ ನೋಡಿಕೊಳ್ಳುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅಖಂಡ ಕರ್ನಾಟಕ ರೈತ ಸಂಘ ಜಂಟಿಯಾಗಿ ಜಿಲ್ಲಾಽಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿಯನ್ನು ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಹಸ್ತಾಂತರಿಸಿದರು.
ರೈತ ಸಂಘದ ರಾಜ್ಯ ಯುವ ಘಟಕದ ಸಂಚಾಲಕ ಸಿದ್ಧನಗೌಡ ಜಲಪೂರ ಮಾತನಾಡಿ, ಬರಗಾಲದಿಂದ ತತ್ತರಿಸಿರುವ ರೈತರಿಗೆ ಕೇಂದ್ರ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ದರ ಹೆಚ್ಚಿಸುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮಧ್ಯ ಪ್ರಾಚ್ಯದ ಯುದ್ಧದ ಪರಿಣಾಮ ಮುಂದಿಟ್ಟುಕೊAಡು ತೈಲ ದರ ಹೆಚ್ಚಿಗೆ ಮಾಡಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತಿದೆ. ರೈತರ ವಾಹನಗಳಿಗೆ ತೈಲ ಕೊರತೆಯಿಂದ ಒಂದು ಕಡೆ ನಿಲ್ಲುವಂತಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ತೈಲ ಬೆಲೆ ಕಡಿಮೆಗೊಳಿಸಬೇಕೆಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಇತ್ತೀಚೆಗೆ ರಸಗೊಬ್ಬರದ ದರ ಕೂಡ ದುಪ್ಪಟ್ಟಾಗಿದೆ. ಅಲ್ಲದೇ, ಗೊಬ್ಬರ ಖರೀದಿ ಸಂದರ್ಭದಲ್ಲಿ ರೈತರಿಗೆ ಎ-ïಐಡಿ ಕಡ್ಡಾಯ ಮಾಡಿರುವದಲ್ಲದೇ, ಪ್ರತಿ ಎಕರೆಗೆ ಒಂದೇ ಚೀಲು ಗೊಬ್ಬರ ಕೊಡುವುದಾಗಿ ಸರ್ಕಾರ ನಿರ್ಣಯ ತಗೆದುಕೊಂಡಿರುವುದರಿAದ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಯಾವುದೇ ಮಾನದಂಡವಿಲ್ಲದೇ ರೈತರಿಗೆ ಅಗತ್ಯವಿರುವಷ್ಟು ಗೊಬ್ಬರವನ್ನು ಎ-ïಐಡಿ ಇಲ್ಲದೇ ಒದಗಿಸುವುದು ಸೇರಿ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿದರು. ಮುಖಂಡರಾದ ಬಸನಗೌಡ ಧರ್ಮಗೊಂಡ, ಉಮೇಶ ವಾಲೀಕಾರ, ಗುರುರಾಜ ಪಡಶೆಟ್ಟಿ, ಹೊನಕೇರಪ್ಪ ತೆಲಗಿ, ಸಿದ್ದಪ್ಪ ಕೋಟ್ಯಾಳ, ಗುರನಗೌಡ ಬಿರಾದಾರ, ಪ್ರಭುಲಿಂಗ ಕಾರಜೋಳ, ಸಂತೋಷ ಚೌರಿ, ಒಗೆಪ್ಪ ಬಿರಾದಾರ, ಸೋಮಯ್ಯ ನಂದಿಕೋಲ, ಅಮೋಗಿ ಉಕ್ಕಲಿ, ಮಲ್ಲಿಕಾರ್ಜುನ ಬಟಗಿ, ಬೋಗೇಶ ಸೊಲ್ಹಾಪೂರ, ನೀಲಮ್ಮ ಕಟ್ಟಿಮನಿ, ಲಂಕೆಪ್ಪ ತಳವಾರ, ನಬಿರಸೂಲ ಬಿರಾದಾರ, ಗುರಪ್ಪ ತಳವಾರ, ಅಜೀಜ ಪಾಟೀಲ ಮತ್ತಿತರರಿದ್ದರು.