ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವಿಜಯಪುರದಲ್ಲಿ ಪದಾಽಕಾರಿಗಳು ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಸಿದ್ದು ರಾಯಣ್ಣನವರ, ವೈ.ಸಿ. ಮಯೂರ, ಮಹಾಂತೇಶ ಸಾಸಬಾಳ ಮತ್ತಿತರರಿದ್ದಾರೆ. 
ವಿಜಯಪುರ

ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯ

ವಿಜಯಪುರ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇತ್ತೀಚೆಗೆ ಆದ ಅವಮಾನ ಖಂಡಿಸಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ.ಜಿ. ಸಾಗರ ಬಣ), ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ, ಸಂವಿಧಾನ ಜಾರಿಗೆ ಬಂದು 77 ವರ್ಷಗಳಾದರೂ ಸಹ ದೇಶದಲ್ಲಿ ಅಸ್ಪÈಶ್ಯತೆ ಜೀವಂತಾಗಿದೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಉತ್ತರಾಖಂಡದ ಹಲ್ವಾವಾನಿಯಾ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ್ದರು. ನಂತರ ಆ ಸ್ಥಳವನ್ನು ಹಿಂದೂಪರ ಸಂಘಟನೆಯವರು ಶುಚಿಗೊಳಿಸಿ, ಹೋಮ-ಹವನವನ್ನು ಮಾಡಿದ್ದಾರೆ. ಜಾತಿ ಹಿನ್ನೆಯಲ್ಲಿ ಅಸ್ಪÈಶ್ಯತೆ ಆಚರಣೆ ಮಾಡುವುದರ ಮೂಲಕ ರಾಷ್ಟಿçÃಯ ಽÃಮಂತ ನಾಯಕರನ್ನು ಅವಮಾನಿಸಲಾಗಿದೆ ಎಂದು ದೂರಿದರು.
ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ಇದು ಕೇವಲ ಖರ್ಗೆಯವರಿಗೆ ಆದ ಅವಮಾನವಲ್ಲ. ಬದಲಾಗಿ, ಶೋಷಿತ ಸಮುದಾಯಕ್ಕೆ ಮಾಡಿದ ಆವಮಾನವಾಗಿದೆ. ಈ ರೀತಿಯ ದೇಶ ಹಾಗೂ ಸಂವಿಧಾನ ವಿರೋಽ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿದ ಆರೋಪಿಗಳನ್ನು ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಮಹಾಂತೇಶ ಸಾಸಬಾಳ, ರಾಜಕುಮಾರ ಕಳ್ಳಿಮನಿ, ದೇವೇಂದ್ರ ಬಾವಿಮನಿ, ಚಂದ್ರಶೇಖರ ವೀಲಕನವರ, ಸುರೇಶ ಶೇಗುಣಸಿ, ಪರಶುರಾಮ ಬೆಕಿನಾಳ, ಶಿವಕುಮಾರ ಗಣಿಹಾರ, ನಾಗೇಶ ರಡ್ಡಿ, ತಮ್ಮಣ್ಣ ಮುದ್ದೇಬಿಹಾಳ, ಪರಶು ಇಂಗಳಗಿ, ದುಂಡ್ಡಪ್ಪ ನಾಟೀಕಾರ, ಗಂಗಾಧರ ಬೇನೂರ, ವಿಜಯಕುಮಾರ್ ಕ್ಯಾತನ, ಗೋಪಾಲ್ ತೊಳೆ ಮತ್ತಿತರರಿದ್ದರು.