ಗಾಂಽ ನಗರ ಮತ್ತು ಶಿಕಾರಖಾನೆ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯರು ವಿಜಯಪುರದಲ್ಲಿ ಅಪರ ಜಿಲ್ಲಾಽಕಾರಿ ಡಾ. ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.
ವಿಜಯಪುರ: ಗಾಂಽ ನಗರ ಮತ್ತು ಶಿಕಾರಖಾನೆ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಗುರುವಾರ ಅಪರ ಜಿಲ್ಲಾಽಕಾರಿ ಡಾ. ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ಶಿವಾಜಿ ಜಮಖಂಡಿ ಮಾತನಾಡಿ, ಗಾಂಽ ನಗರ ಮತ್ತು ಶಿಕಾರಖಾನೆ ಓಣಿಯ ದಲಿತ ಕೇರಿಯಲ್ಲಿನ ಅಪೂರ್ಣ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ, ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಬAಧಪಟ್ಟ ಗುತ್ತಿಗೆದಾರರ ಬಿಲï ಪಾವತಿಯನ್ನು ತಡೆಹಿಡಿಯಬೇಕು. ದಲಿತ ಕೇರಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಓಣಿಯಲ್ಲಿ ಕಳೆದ ಒಂದು ವರ್ಷದಿಂದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ, ಇದುವರೆಗೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ರಸ್ತೆ ಕಾಮಗಾರಿಯನ್ನು ಅರೆಬರೆಯಾಗಿ ಮಾಡಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿz್ದÁರೆ. ರಸ್ತೆಯ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳು ಓಡಾಡಲು ಬಹಳಷ್ಟು ತೊಂದರೆ ಅನುಭವಿಸುತ್ತಿz್ದÁರೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಅಪೂರ್ಣ ಕಾಮಗಾರಿಯನ್ನು ಕೂಡಲೇ ಶೀಘ್ರವಾಗಿ ಪೂರ್ಣಗೊಳಿಸಲು ಸಂಬAಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಪ್ರಮಖರಾದ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಐಶ್ವರ್ಯ ಜಮಖಂಡಿ, ವಿಜಯಲಕ್ಷಿ÷್ಮÃ, ಶ್ರೀಕಾಂತ ಹಾದಿಮನಿ, ಕವಿತಾ ಮಂಚದ, ಸುಲೋಚನಾ ಸಕರ, ಲತಾ ಯತಾಗಳತೆ, ರಾಜಮಾ ಡವಳಗಿ, ಪ್ರೇಮಾ, ಅಮೀನಾ, ಅಶೋಕ ದರ್ಗಾ, ಪ್ರಶಾಂತ ಜಮಖಂಡಿ, ಅಯ್ಯಪ್ಪ ಜಮಖಂಡಿ ಮತ್ತಿತರರಿದ್ದರು.