ಅನಽಕೃತ ಪಿಜಿ ಹಾಗೂ ಖಾಸಗಿ ಸ್ಟಡಿ ಲೈಬ್ರರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಶೋಕ ಧಾಮ -Ëಂಡೇಶನ್‌ನ ಪದಾಽಕಾರಿಗಳು ವಿಜಯಪುರದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಪ್ರಕಾಶ ಮಿರ್ಜಿ, ಮಧೂರ ಮತ್ತಿತರರಿದ್ದಾರೆ.
ನಗರ ಸೇರಿ ಜಿಲ್ಲೆಯಾದ್ಯಂತ ಅನುಮತಿ ಪಡೆಯದೆ ಮತ್ತು ನಿಯಮಗಳನ್ನು ಉಲ್ಲಂöಸಿ ನಡೆಯುತ್ತಿರುವ ಪಿಜಿ ಹಾಗೂ ಖಾಸಗಿ ಸ್ಟಡಿ ಲೈಬ್ರರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಶೋಕ ಧಾಮ -Ëಂಡೇಶನ್‌ನ ಪದಾಽಕಾರಿಗಳು ಶುಕ್ರವಾರ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದ್ದಾರೆ.
-Ëಂಡೇಶನ್‌ನ ಗೌರವ ಅಧ್ಯಕ್ಷ ಪ್ರಕಾಶ ಮಿರ್ಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನೇ ದುರುಪಯೋಗಪಡಿಸಿಕೊಂಡ ಹಲವು ಅನಽಕೃತ ಪಿಜಿಗಳು ಮತ್ತು ಖಾಸಗಿ ಸ್ಟಡಿ ಲೈಬ್ರರಿಗಳು ತಲೆ ಎತ್ತಿವೆ. ಬಹುತೇಕ ಪಿಜಿ ಹಾಗೂ ಲೈಬ್ರರಿಗಳು ಸ್ಥಳೀಯ ಪಾಲಿಕೆಯಿಂದ ಅಗತ್ಯ ಪರವಾನಗಿ ಪಡೆದಿಲ್ಲ.
ಅಲ್ಲದೆ, ಅಗ್ನಿಶಾಮಕ ಇಲಾಖೆಯ ಎನ್‌ಒಸಿ, ತುರ್ತು ನಿರ್ಗಮನ ದ್ವಾರಗಳು ಹಾಗೂ ಕನಿಷ್ಠ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಮನೆಗಳು ಮತ್ತು ಕಿರಿದಾದ ಕಟ್ಟಡಗಳಲ್ಲಿ ಇವುಗಳನ್ನು ನಡೆಸಲಾಗುತ್ತಿದ್ದು, ಅವುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕೆಲವು ಪಿಜಿ ಹಾಗೂ ಲೈಬ್ರರಿಗಳಲ್ಲಿ ಭದ್ರತಾ ಲೋಪಗಳಿವೆ. ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರವೇಶ-ನಿರ್ಗಮನದ ದಾಖಲಾತಿ ಪುಸ್ತಕಗಳನ್ನು (ರಿಜಿಸ್ಟರ್) ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಅದರಿಂದ ವಿದ್ಯಾರ್ಥಿಗಳು ಮತ್ತು ವಿಶೇಷವಾಗಿ ಯುವತಿಯರ ಸುರಕ್ಷತೆ ಕುರಿತು ಆತಂಕ ಮೂಡಿದೆ ಎಂದು ಅವರು ತಿಳಿಸಿದರು.
ಸಂಬAಽಸಿದ ಇಲಾಖೆ ಅಽಕಾರಿಗಳು ಈ ಕುರಿತು ಪಿಜಿ ಮತ್ತು ಖಾಸಗಿ ಲೈಬ್ರರಿಗಳ ಮೇಳೆ ತಪಾಸಣೆ ನಡೆಸಬೇಕು. ನಿಯಮ ಉಲ್ಲಂöಸಿ ಅನಽಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
-Ëಂಡೇಶನ್‌ನ ಪದಾಽಕಾರಿಗಳಾದ ಮಧೂರ, ಶಶಿಧರ, ಅಭಿಲಾಷ, ಲಖನ್, ವಿಶ್ವಾರಾಧ್ಯ ವಾಲೀಕಾರ ಮತ್ತಿತರರಿದ್ದರು.