ವಿಜಯಪುರದ ಬಿಎಲ್‌ಡಿಇ ಇಂಜಿನಿಯರಿAಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸೃಜನಾತ್ಮಕ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳು ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ವಿಕ್ರಮ ನಾರ್ವೇಕರ ಉಪನ್ಯಾಸ ನೀಡಿದರು.
ವಿಜಯಪುರ: ನಗರದ ಬಿಎಲïಡಿಇ ಸಂಸ್ಥೆಯ ವಚನ ಪಿತಾಮಹ ಡಾ. -À.ಗು. ಹಳಕಟ್ಟಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಸೋಮವಾರ ಸೃಜನಾತ್ಮಕ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳು ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಬಿಎಲïಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆ ಮತ್ತು ಬಿ.ಎಂ. ಪಾಟೀಲ ಪಬ್ಲಿಕ್ (ಐಸಿಎಸ್‌ಇ) ಶಾಲೆಯ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಶೈಕ್ಷಣಿಕ ಸಂಯೋಜಕಿ ದೀಪಾ ಜಂಬೂರೆ ಚಾಲನೆ ನೀಡಿದರು.
ಬಿ.ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯ ಉಪ ಪ್ರಾಚಾರ್ಯೆ ವಸುಧಾ ನಾರ್ವೇಕರ ಅವರು ಜಾಗೃತ ಮನಸ್ಥಿತಿ ಮತ್ತು ಭೋದನೆ ತಂತ್ರಗಳು ವಿಷಯದ ಕುರಿತು ಮತ್ತು ಬಿ.ಎಂ. ಪಾಟೀಲ ಪಬ್ಲಿಕ್ (ಐಸಿಎಸ್‌ಇ) ಶಾಲೆಯ ಪ್ರಾಚಾರ್ಯ ವಿಕ್ರಮ ನಾರ್ವೇಕರ ಅವರು ಸೃಜನಾತ್ಮಕ ಬೋಧನೆ ಮತ್ತು ಕಲಿಕೆಯ ಕಾರ್ಯತಂತ್ರಗಳು ವಿಷಯದ ಕುರಿತು ಉಪನ್ಯಾಸ ನೀಡಿ, ಮನಸ್ಸಿನ ಏಕಾಗ್ರತೆ, ಶಾಂತ ಮನೋಭಾವ ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಸುವ ವಿಧಾನಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.
ತರಬೇತಿಯಲ್ಲಿ ವಿವಿಧ ಚಟುವಟಿಕೆಗಳು, ಗುಂಪು ಚರ್ಚೆಗಳು ಹಾಗೂ ಪ್ರಾಯೋಗಿಕ ಅಭ್ಯಾಸಗಳನ್ನು ಆಯೋಜಿಸಲಾಗಿತ್ತು. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಯಾವ ರೀತಿ ಕಲಿಕಾ ಆಸಕ್ತಿ ಉಂಟು ಮಾಡಬಹುದು ಎಂಬುವುದನ್ನು ವಿವರಿಸಲಾಯಿತು.
ಯೋಗಿರಾಜ ಹಳಕಟ್ಟಿ ಸ್ವಾಗತಿಸಿದರು. ಮೀರಾ ಮೋಕಾಶಿ ವಂದಿಸಿದರು.