ವಿಜಯಪುರದ ಶಾಂತಿನಿಕೇತನ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಹಕಾರ ವಿಚಾರ ಸಂಕೀರಣವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದು ಮಲ್ಲಿಕಾರ್ಜುನಮಠ, ಅರುಣ ಮಠ, ಅರುಣ ವಾರದ ಮತ್ತಿತರರಿದ್ದರು. 
ವಿಜಯಪುರ

ಶಾಂತಿನಿಕೇತನ ಕಾಲೇಜಿನಲ್ಲಿ ಸಹಕಾರ ವಿಚಾರ ಸಂಕಿರಣ

ವಿಜಯಪುರ : ನಗರದ ಶಾಂತಿನಿಕೇತನ ಕಾಲೇಜಿನ ಸಭಾ ಭವನದಲ್ಲಿ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ 5 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ `ಸಹಕಾರದಿಂದ ಸಮೃದ್ಧಿ' ಎಂಬ ಧ್ಯೇಯ ವಾಕ್ಯದೊಂದಿಗೆ ಬುಧವಾರ ಸಹಕಾರ ವಿಚಾರ ಸಂಕಿರಣ ನಡೆಯಿತು.
ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಮತ್ತು ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತ ಹಾಗೂ ಶಾಂತಿನಿಕೇತನ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜಯ ಬ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಆರ್.ಎಂ. ಬಣಕಾರ ಸಹಕಾರ ಕ್ಷೇತ್ರದ ಪರಿಚಯ ಮತ್ತು ಕಾರ್ಯವೈಖರಿಗಳ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅತಿಥಿಗಳಾಗಿ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಉಪಾಧ್ಯಕ್ಷ ಚಂದ್ರಶೇಖರ ಕವಟಗಿ, ಒಕ್ಕೂಟದ ನಿರ್ದೇಶಕರಾದ ಸಿದ್ದು ಮಲ್ಲಿಕಾರ್ಜುನಮಠ, ಅರುಣ ಮಠ, ಅರುಣ ವಾರದ ಉಪಸ್ಥಿತಿ ವಹಿಸಿದ್ದರು.
ಪೂನಂ ಮತ್ತು ಕುಮಾರಿ ಪಲ್ಲವಿ ಪ್ರಾರ್ಥಿಸಿದರು. ಅರುಣ ವಾರದ ಸ್ವಾಗತಿಸಿದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಪಂಪನಗೌಡ ಪಾಟೀಲ ನಿರೂಪಿಸಿದರು. ಚಂದ್ರಶೇಖರ ಕವಟಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವರಾಜ್ ಎಸ್. ವಂದಿಸಿದರು.