ವಿಜಯಪುರದ ಜಿಲ್ಲಾ ಸಹಕಾರಿ ಸಂಘಗಳ ಯೂನಿಯನ್ ಸಭಾ ಭವನದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಜಿಲ್ಲಾ ಕಾರ್ಮಿಕರ -Éಡರೇಷನ್ ಜಿಲ್ಲಾ ಸಮಾವೇಶ ನಡೆಯಿತು. ಶಬ್ಬೀರ ಜಾಲಹಳ್ಳಿ, ಸುಮಂಗಲಾ ಆನಂದಶೆಟ್ಟಿ, ಚಂದ್ರಶೇಖರ ಬುರಣಾಪುರ ಮತ್ತಿತರರಿದ್ದರು.
ವಿಜಯಪುರ: ದೊಡ್ಡ ದೊಡ್ಡ ಅತಂಸ್ತು ಕಟ್ಟುವ ಕಟ್ಟಡ ಕಾರ್ಮಿಕರು ಇನ್ನು ಬಡತನದಲ್ಲೇ ಇದ್ದಾರೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ -ೆಡೆರೇಷನ್‌ನ ರಾಜ್ಯ ಕಾರ್ಯದರ್ಶಿ ಶಬ್ಬೀರ ಜಾಲಹಳ್ಳಿ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಸಂಘಗಳ ಯೂನಿಯನ್ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಜಿಲ್ಲಾ ಕಾರ್ಮಿಕರ -Éಡರೇಷನ್ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಂಡಳಿಯು ಹೋರಾಟದ ಮೂಲಕ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ, ಮದುವೆಗೆ, ವೈದ್ಯಕೀಯ ಸೌಲಭ್ಯಗಳು, ಅಪಘಾತವಾದರೆ ೫ ರಿಂದ ೮ ಲಕ್ಷ ರೂ. ಪರಿಹಾರ ಸೌಲಭ್ಯ ಸಿಗುವಂತೆ ಮಾಡಿದೆ. ದೇಶದಲ್ಲಿ ಹೆಚ್ಚು ಸೌಲಭ್ಯವನ್ನು ಮಂಡಳಿಯಿAದ ರಾಜ್ಯದ ಕಾರ್ಮಿಕರು ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ ಕಾರ್ಮಿಕ ವಿರೋಽ ೪ ಸಂಹಿತಿಗಳು ವಿರೋಽಸಬೇಕು. ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಕಾರ್ಡ್ಗಳನ್ನು ಮಾಡಿಸುವ ಜತೆಗೆ ಸಮಯಕ್ಕೆ ಸರಿಯಾಗಿ ನವೀಕರಣ ಮಾಡಿಸಬೇಕು ಎಂದು ಸಲಹೆ ನೀಡಿದರು.
೧೮ ಜನರನ್ನೊಳಗೊಂಡ ಸಂಚಾಲಕರ ಸಮಿತಿ ರಚಿಸಲಾಯಿತು. ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಆನಂದಶೆಟ್ಟಿ, ದಿನಗೂಲಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಬುರಣಾಪುರ ಮಾತನಾಡಿದರು. ರೂಪಾ ಪಂಚAಗಿ ಸ್ವಾಗತಿಸಿದರು. ಸೋಮಪ್ಪ ಆಯಟ್ಟಿ ನಿರೂಪಿಸಿದರು. ಈರಣ್ಣ ಬೆಳ್ಳುಂಡಗಿ ವಂದಿಸಿದರು.
ಜಿಲ್ಲಾ ಗ್ರಾ.ಪಂ. ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಲಾಲ್ ಅಹ್ಮದ್ ಶೇಖ, ಸಂಗಪ್ಪ ಕಪಾಲಿ ಮತ್ತಿತರರಿದ್ದಾರೆ.