ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಪಂಚಮಸಾಲಿ ಯುವ ಶಕ್ತಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸುರೇಶ ಖೇಡ, ಆನಂದ ಕುಮಾರ ಜಂಬಗಿ, ವಿಕಾಸ ಖೇಡ ಮತ್ತಿತರರಿದ್ದಾರೆ. 
ವಿಜಯಪುರ

ಪಂಚಮಸಾಲಿ ಯುವ ಶಕ್ತಿ ಸಂಘದಿಂದ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ
  • ಹೋರಾಟ
  • ರಾಜ್ಯಪಾಲರಿಗೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಧರಣಿ ನಡೆಸುತ್ತಿದ್ದ ಹೋರಾಟಗಾರರನ್ನು ಬಂಧಿಸಿರುವ ಪ್ರಕರಣ ಖಂಡನೀಯ. ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಮಸಾಲಿ ಯುವ ಶಕ್ತಿ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಶಾಂತಿಯುತವಾಗಿ ನಡೆಯುತ್ತಿದ್ದ ಧರಣಿ ಹತ್ತಿಕ್ಕಲು ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಮವಸ್ತ್ರದಲ್ಲಿರದ ಪೊಲೀಸರು ಧರಣಿ ನಿರತರ ಜೊತೆ ನಡೆದುಕೊಂಡ ರೀತಿ ಖಂಡನೀಯ. ಬಂಧಿತ ಆರು ಜನ ಹೋರಾಟಗಾರರನ್ನು ಬಿಡುಗಡೆಗೊಳಿಸದೇ ಇದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸುರೇಶ ಖೇಡ, ಆನಂದ ಕುಮಾರ ಜಂಬಗಿ, ವಿಕಾಸ ಖೇಡ, ಸಾಗರ ಬೇನೂರ, ಎಂ.ಬಿ. ಪಾಟೀಲ, ಅಮೃತ ಪಾಟೀಲ, ಅರ್ಜುನ ಹೊರ್ತಿ, ಪ್ರದೀಪ ಬೆನಕನಳ್ಳಿ, ಅಂಬಣ್ಣ ಝಳಕಿ, ಎಂ.ವೈ. ಬಿರಾದಾರ ಮತ್ತಿತರರಿದ್ದರು.