ಇಂಡಿ ತಾಲೂಕಿನ ಭುಯ್ಯಾರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ಸೂರ್ಯಕಾಂತಿ ಬೆಳೆ. ಪರಿಹಾರ
ಉಮೇಶ ಬಳಬಟ್ಟಿ, ಇಂಡಿ: ತಾಲೂಕಿನಾದ್ಯಂತ ಎರಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಸಂಪೂರ್ಣ ಹಾನಿಯಾದ ವಿವಿಧ ಬೆಳೆಗಳಿಗೆ ಇದುವರೆಗೂ ಸರ್ಕಾರದಿಂದ ನೈಯಾಪೈಸಾ ಪರಿಹಾರ ಜಮೆ ಆಗದಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಸುರಿದ ಮಳೆಗೆ ಇನ್ನೂ ಕೆಲವೆಡೆ ಜಮೀನಿನಲ್ಲಿ ನೀರು ನಿಂತುಕೊAಡಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಽÃನದಲ್ಲಿ ಬರುವ ಎಲ್ಲ ಬೆಳೆಗಳು ಹಾನಿಯಾಗಿವೆ. ಎರಡೂ ಇಲಾಖೆಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಬೆಳೆ ಹಾನಿಯಾದ ಕುರಿತು ಎರಡು ಬಾರಿ ಸರ್ವೇ ನಡೆಸಿದ್ದಾರೆ.
ತೊಗರಿ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಸೂರ್ಯಪಾನ, ದಾಳಿಂಬೆ, ನಿಂಬೆ, ಕಬ್ಬು, ಬಾಳೆ, ಉದ್ದು, ಹೆಸರು ಸೇರಿ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಹಲವಾರು ಮನೆಗಳೂ ಬಿದ್ದಿವೆ. ಈ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ವರದಿ ಸಲ್ಲಿಸಿ ಒಂದೂವರೆ ತಿಂಗಳು ಗತಿಸಿದರೂ ಪರಿಹಾರ ರೈತರ ಖಾತೆಗೆ ಜಮೆ ಆಗಿಲ್ಲ ಎಂದು ರೈತರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕರ ಭೇಟಿ:
ರೈತರ ಬೆಳೆ ಹಾನಿ ಪರಿಶೀಲಿಸಲು ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಬಿಜೆಪಿ ನಿಯೋಗ ಸಹ ತಾಲೂಕಿನ ವಿವಿಧೆಡೆ ಭೇಟಿ ಮಾಡಿದೆ. ಅಲ್ಲದೆ ಸುದ್ದಿಗೋಷ್ಠಿ ನಡೆಸಿ ರೈತರ ಬೆಳೆ ಹಾಳಾಗಿದ್ದು ಕೂಡಲೆ ಹೆಚ್ಚಿನ ಪರಿಹಾರ ಘೋಷಿಸಿ ಪರಿಹಾರ ವಿತರಣೆ ಮಾಡಲು ಆಗ್ರಹಿಸಿತ್ತು. ಆದರೂ ಇಲ್ಲಿತನಕ ಪರಿಹಾರ ಬಂದಿಲ್ಲ. ಈ ಕುರಿತು ಯಾವ ನಾಯಕನೂ ಧ್ವನಿ ಎತ್ತದೆ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಜಿಲ್ಲಾದ್ಯಂತ ಇತ್ತೀಚೆಗೆ ಅಕಾಲಿಕ ಮಳೆಯಾಗಿ ರೈತರ ಬೆಳೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರಿಗೆ ಪರಿಹಾರ ನೀಡದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ವಿರೋಧ ಪಕ್ಷದವರು ಖುದ್ದು ಆಗಮಿಸಿ ಸಮೀಕ್ಷೆ ನಡೆಸಿದ್ದಾರೆ. ಆದರೆ, ಇದುವರೆಗೂ ರೈತರಿಗೆ ಪರಿಹಾರ ಮಾತ್ರ ಬಂದಿಲ್ಲ.
ಈಗಾಗಲೆ ಇಲಾಖೆಯಿಂದ ಸರ್ಕಾರಕ್ಕೆ ಬೆಳೆ ಹಾನಿ ವರದಿ ಸಲ್ಲಿಕೆಯಾಗಿದೆ. ಡಾಟಾ ಎಂಟ್ರಿ ಕಾರ್ಯವೂ ಮುಗಿದಿದೆ. ಇದೇ ವಾರದಲ್ಲಿ ರೈತರ ಖಾತೆಗೆ ಪರಿಹಾರ ಜಮೆ ಆಗುವ ನಿರೀಕ್ಷೆ ಇದೆ.
ಇಂಡಿಯಲ್ಲಿ ವಿರೋಧ ಪಕ್ಷದ ನಾಯಕರು ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. (ಸಂಗ್ರಹ ಚಿತ್ರ).