ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಾಸಿಂಪೀರ ವಾಲಿಕಾರ ಉದ್ಘಾಟಿಸಿದರು. ಎ.ಎಚ್. ಕೊಳಮಲಿ, ರಾಜಶ್ರೀ ಜುಗತಿ, ರೋಹಿತ ಜುಗತಿ ಮತ್ತಿತರರಿದ್ದಾರೆ. 
ವಿಜಯಪುರ

ಅದ್ಧೂರಿಯಾಗಿ ನೆರವೇರಿದ ಚೇತನಾ ಸಾಂಸ್ಕೃತಿಕ ಉತ್ಸವ

ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಚೇತನಾ ಶಿಕ್ಷಣ ಸಂಸ್ಥೆಯ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಚೇತನಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ನೆರವೇರಿಸಿದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, `ವಿದ್ಯಾರ್ಥಿಗಳು ವಿದ್ಯೆಯ ಜತೆ ಜತೆಗೆ ಉತ್ತಮ ಸಂಸ್ಕಾರ ಪಡೆಯಲು ಮುಂದಾಗಬೇಕು. ಸತತ ಅಧ್ಯಯನ ಕೈಗೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಜ್ಞಾನಕ್ಕೆ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ' ಎಂದರು.
ನಮ್ಮ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಯುವ ಜನತೆ ದೇಶದ ಇತಿಹಾಸ ಹಾಗೂ ಪರಂಪರೆ ಅರಿಯಬೇಕು. ಏಕಾಗ್ರತೆಯ ಮೂಲಕ ಅಧ್ಯಯನ ನಡೆಸಿದರೆ ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ ಮಾತನಾಡಿ, ಶಿಕ್ಷಣವಿಲ್ಲದ ಸಂಪತ್ತು ನೀರಿಲ್ಲದ ಬಾವಿಯಂತೆ. ಮನುಷ್ಯನ ಭವಿಷ್ಯತ್ತಿನ ಜೀವನಕ್ಕೆ ಶಿಕ್ಷಣವೇ ಬಹುದೊಡ್ಡ ಅಡಿಪಾಯ ಎಂದರು.
ಮುಖ್ಯ ಗುರು ಎ.ಎಚ್. ಕೊಳಮಲಿ ಮಾತನಾಡಿ, ಮಗುವಿನ ಭವಿಷ್ಯ ನಿರ್ಮಿಸುವಲ್ಲಿ ತಂದೆ-ತಾಯಿಯ ಜತೆಗೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಸAಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ನಾಗರಾಜ ಹೇರಲಗಿ, ಸಹಾಯಕ ಆಡಳಿತಾಽಕಾರಿ ಪ್ರಮೋದ ಕುಲಕರ್ಣಿ, ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಬ್ಯಾಕೋಡ, ಸಿ.ಎಸ್. ವಾಲಿ, ಸಾಗರ ಕುಲಕರ್ಣಿ, ಸಂಯೋಜಕಿ ಹೇಮಾ ಪಾಟನೆ ಮತ್ತಿತರರಿದ್ದರು.