ವಿಜಯಪುರ: ಶರಣ ಸಂಕುಲದಿAದ ಷಟ್‌ಸ್ಥಲ ಜ್ಞಾನಿ ಎಂದು ಕರೆಸಿಕೊಂಡ ಶ್ರೇಷ್ಠ ಅನುಭಾವಿ ಶರಣ ಚನ್ನಬಸವಣ್ಣ ಎಂದು ಚಡಚಣದ ಸಂಗಮೇಶ್ವರ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಎಂ.ಎಸ್. ಮಾಗಣಗೇರಿ ಹೇಳಿದರು.
ನಗರದ ಡಾ. -À.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಚಿಂತನ-ಸಾAಸ್ಕೃತಿಕ ಬಳಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅನುಭಾವಿಗಳು ಮರುಭೆಟ್ಟಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಚಿಕ್ಕ ವಯಸ್ಸಿನಲ್ಲಿದ್ದಾಗ ಚನ್ನಬಸವಣ್ಣ ಬಹಳ ತುಂಟನಾಗಿದ್ದರೂ, ಅನುಭಾವದ ನೆಲೆಯಲ್ಲಿ ಜ್ಞಾನದಿಂದ ಹಿರಿಯನಾಗಿದ್ದ. ಅನುಭವ ಮಂಟಪದಲ್ಲಿ ಭಾಗವಹಿಸಿ ವಚನಗಳನ್ನು ಹಾಡುವ ಮೂಲಕ ಉನ್ನತ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದ. ಅಲ್ಲದೇ, ಶರಣ ಬಳಗವನ್ನು ಮಂತ್ರ ಮುಗ್ಧರನ್ನಾಗಿಸುವಷ್ಟು ಅಪ್ರತಿಮ ಪ್ರತಿಭಾನ್ವಿತನಾಗಿದ್ದ. ಈತನು ವಚನಗಳನ್ನು ಪರಶೀಲಿಸಿ ತೀರ್ಮಾನ ಮಾಡಿ. ಮುದ್ರೆ ಹಾಕಿದ ಮೇಲೆಯೇ ವಚನಗಳು ಅಂಗೀಕಾರವಾಗುತ್ತಿದ್ದವು ಎಂದರು.
ಡಾ. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಲಮಪ್ರಭುವಿನಿಂದ ದಾರ್ಶನಿಕ ಎಂದು ಕರೆಸಿಕೊಂಡ ಚನ್ನಬಸವಣ್ಣನ ಅನುಭಾವ ಸಾಗರದಷ್ಟು ವಿಶಾಲ. ಅನುಭವ ಮಂಟಪದಲ್ಲಿ ಎಲ್ಲರೂ ಚರ್ಚಿಸಿದ ಮೇಲೆ ಆ ವಚನಗಳನ್ನು ಚನ್ನಬಸವಣ್ಣನ ಅಂತಿಮ ನಿರ್ಣಯದೊಂದಿಗೆ ಗ್ರಂಥಭAಡಾರಕ್ಕೆ ಸೇರುತ್ತಿದ್ದವು ಎಂದು ತಿಳಿಸಿದರು.
ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಸುಭಾಷ ಕನ್ನೂರ ನಿರೂಪಿಸಿದರು. ಬಿ.ಎಂ. ಪಾಟೀಲ, ಎಂ.ಎಸ್.ಮದಭಾವಿ, ಆರ್.ಕೆ. ಕುಲಕರ್ಣಿ, ಎಂ.ಎಸ್. ಚಾಂದಕವಟೆ, ಎಸ್.ವೈ. ಗದಗ, ಎಸ್.ಜಿ.ನಾಡಗೌಡ, ಎಂ.ಎಲ್. ಮದಭಾವಿ, ಕೆ.ಎಸ್. ಬಿರಾದಾರ, ಶರಣಗೌಡ ಪಾಟೀಲ, ಜಿ.ಆರ್. ಕುಲಕರ್ಣಿ, ವಿ.ಎಂ. ಬಾಗಾಯತ, ಮಹಾಂತೇಶ ಗುಬ್ಬೇವಾಡ, ಎಂ.ಎಸ್. ಝಳಕಿ, ಮಾಧವ ಗುಡಿ, ಅಂಬಾದಾಸ ಜೋÃಶಿ, ಎನ್.ಆರ್. ಕುಲಕರ್ಣಿ, ಶರಣಗೌಡ ಪಾಟೀಲ, ಸುಭಾಷ ಯಾದವಾಡ, ಬಿ.ಸಿ. ಹತ್ತಿ, ಆರ್.ಜಿ. ಬ್ಯಾಕೋಡ, ದಾಕ್ಷಾಯಣಿ ಬಿರಾದಾರ ಮತ್ತಿತರರಿದ್ದರು.