ಎಸ್‌ಐಆರ್ ಪ್ರಕ್ರಿಯೆ ಆರಂಭಗೊAಡ ಹಿನ್ನೆಲೆ ಬಿಎಲ್‌ಒ ಮತ್ತು ಅಽಕಾರಿಗಳ ತಂಡದವರು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ರ ಮನೆಗೆ ಭೇಟಿ ನೀಡಿ -Áಮ್ ಭರ್ತಿ ಕಾರ್ಯ ನೆರವೇರಿಸಿದರು. ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ನಗರದಲ್ಲಿ ಬೂತ್ ಮಟ್ಟದ ಅಽಕಾರಿಗಳಿಗೆ (ಬಿ.ಎಲï.ಒ) ಅಗತ್ಯ ಮಾಹಿತಿ ನೀಡುವ ಮೂಲಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಭಾಗಿಯಾದರು.
ನಂತರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದಿಂದ ಕೈಗೊಂಡ ಎಸ್‌ಐಆರ್ ಪ್ರಕ್ರಿಯೆ ರಾಜ್ಯದಲ್ಲಿ ಆರಂಭಗೊAಡ ಕೆಲವು ದಿನಗಳಿಂದ ಬಿಎಲïಒಗಳಿಗೆ ಕೆಲವರು ಬೆದರಿಕೆ ಹಾಗೂ ಒತ್ತಡದ ಕರೆಗಳು ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೂ ಸಹ ಯಾರ ಒತ್ತಡಕ್ಕೆ, ಬೆದರಿಕೆಗೆ ಮಣಿಯದೇ ಚುನಾವಣಾ ಅಽಕಾರಿಗಳ ಮಾರ್ಗಸೂಚಿಯಂತೆ
ಕಾರ್ಯನಿರ್ವಹಿಸಲು ಸಂಬAಽಸಿದ ಅಽಕಾರಿಗಳಿಗೆ ಸಲಹೆ ನೀಡಿದರು.
ನಗರದ ಎಲ್ಲ ಮತದಾರ ನಾಗರಿಕರು ಬಿಎಲ್‌ಒಗಳು ನೀಡಿದ ಅರ್ಜಿ -ಫಾರ್ಮ್ಗಳನ್ನು ಮೊದಲು ಝರಾಕ್ಸ್ ಪ್ರತಿಯಲ್ಲಿ ತುಂಬಿ ನಂತರ ಅವುಗಳನ್ನು ಬಿಎಲïಒಗಳಿಗೆ ತೋರಿಸಿ ನಂತರ ಮೂಲ ಪ್ರತಿ (ಓರಿಜಿನಲ್ -ಫಾರ್ಮ್) ಯಲ್ಲಿ ತುಂಬಬೇಕು. ಬಿಎಲïಒಗಳು ಸಹ ಮನೆ ಮನೆಗೆ ಭೇಟಿ ನೀಡಿ, ಸಮಾಧಾನ ಮತ್ತು ಎಚ್ಚರಿಕೆಯಿಂದ -ಫಾರ್ಮ್ ತುಂಬಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ಮೂಲಕ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದರು.