ಉಮರಾಣಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಸಂಜೀವ ಐಹೊಳೆ ನೇತೃತ್ವದಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಸಭೆ ನಡೆಯಿತು. ಮುಖಂಡರಾದ ಭೀಮು ಬಿರಾದಾರ, ರಾಜು ಮಗಿಮಠ, ಕಾಂತುಗೌಡ ಪಾಟೀಲ, ಸುಭಾಷ ಭೈರಗೊಂಡ ಇತರರಿದ್ದಾರೆ.
- ನಾಗಠಾಣ ಕ್ಷೇತ್ರದಲ್ಲಿ ಸಂಚಲನ
- ಬೂತ್ ಮಟ್ಟದಲ್ಲಿ ಪದಾಧಿಕಾರಿಗಳ ಸಭೆ
- ಪಕ್ಷದ ಕಾರ್ಯಕರ್ತರಿಗೆ ವಿಶೇಷ ಸಲಹೆ
ವಿಜಯಪುರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ ಜನರಿಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಲ್ಲದೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ನಾಗಠಾಣ ಕ್ಷೇತ್ರ ಪರಾಜಿತ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಹೇಳಿದರು.
ನಾಗಠಾಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯ ಹಿನ್ನೆಲೆ ಉಮರಾಣಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರ ಪಟ್ಟಿಯಲ್ಲಿ ಹೆಸರು ಬಿಡದೆ ಹೊಸದಾಗಿ ಸೇರ್ಪಡೆ ಮಾಡಿಸುವುದು, ಮೃತರು ಮತ್ತು ಸ್ಥಳಾಂತರಗೊಂಡವರ ಹೆಸರು ತೆಗೆಸುವುದು ಸೇರಿದಂತೆ ಬೂತ್ ಮಟ್ಟದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.
ಮುಂಬರುವ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಬೇಕೆಂದು ಸಂಜೀವ ಐಹೊಳಿ ಸೂಚಿಸಿದರು.
ಜಿಲ್ಲಾ ಉಪಾಧ್ಯಕ್ಷ ಭೀಮು ಬಿರಾದಾರ, ರಾಜು ಮಗಿಮಠ, ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ಸುಭಾಷ ಭೈರಗೊಂಡ, ಸಂತೋಷ ಭೈರಗೊಂಡ, ನಾಗಪ್ಪ ಭೈರಗೊಂಡ, ಉಮೇಶ ಭೈರಗೊಂಡ, ಅಶೋಕ ಭೈರಗೊಂಡ, ಮುತ್ತುರಾಜ್ ಹುಳ್ಳೆ, ಭೀಮಣ್ಣ ಭೈರಗೊಂಡ, ವಿಶ್ವನಾಥ ಬಿಜ್ಜರಗಿ, ಸಿದ್ಧರಾಮ ಕೋಳಿ, ಧರೆಪ್ಪ ಪೀರಗೊಂಡ, ಅಜಿತ್ ವಾಲಿ, ಹಣಮಂತ ಬಿರಾದಾರ ಹಾಗೂ ಉಮರಾಣಿ ಮತ್ತು ಟಾಕಳಿ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.