ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಗುರುಲಿಂಗಪ್ಪ ಅಂಗಡಿ, ಉಮೇಶ ಕೋಳಕೂರ, ಸಂಜೀವ ಐಹೊಳೆ ಮತ್ತಿತರರಿದ್ದಾರೆ. 
ವಿಜಯಪುರ

ಬಿಹಾರ ಚುನಾವಣೆ ಫಲಿತಾಂಶ ಪ್ರಕಟ, ಎನ್‌ಡಿಯ ಮೈತ್ರಿಕೂಟಕ್ಕೆ ಗೆಲುವು, ಬಿಜೆಪಿ ನಾಯಕರಿಂದ ಭರ್ಜರಿ ವಿಜಯೋತ್ಸವ

ಪ್ರಮುಖ ಮುಖ್ಯಾಂಶಗಳು

  • ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ
  • ಬಿಹಾರ ಚುನಾವಣೆ ಫಲಿತಾಂಶ ಪ್ರಕಟ
  • ಬಿಜೆಪಿ ನಾಯಕರಿಂದ ಭರ್ಜರಿ ವಿಜಯೋತ್ಸವ
ವಿಜಯಪುರ: ಬಿಹಾರನಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆ ಬಿಜೆಪಿ ಜಿಲ್ಲಾಘಟಕದಿಂದ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಶುಕ್ರವಾರ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಜಯಘೋಷ ಮೊಳಗಿಸಿದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಸಾಧನೆ ಕೊಂಡಾಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಬಿಜೆಪಿಯ ಜನಪರ ನಿಲುವಿಗೆ ಬಿಹಾರ ಜನತೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಬಿಹಾರ ಸರ್ವತೋಮುಖ ವಿಕಾಸವನ್ನು ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಬಿಹಾರ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ವಿನಾಕಾರಣ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ಮೊದಲಾದ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜನತೆ ಬಿಜೆಪಿಯೊಂದಿಗೆ ಇದ್ದಾರೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಿಹಾರ ಚುನಾವಣೆಯೇ ದಿಕ್ಸೂಚಿ, ಇಲ್ಲಿಯೂ ಬಿಜೆಪಿ ಅತ್ಯಂತ ದಾಖಲೆಯೊಂದಿಗೆ ವಿಜಯ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಉಸಿರಾಗಿಸಿಕೊಂಡಿರುವ ನೀತಿಶಕುಮಾರ ಅವರ ನಾಯಕತ್ವಕ್ಕೆ ಬಿಹಾರ ಜನತೆ ಮನ್ನಣೆ ನೀಡಿದ್ದಾರೆ ಎಂದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಸಂಜೀವ ಐಹೊಳೆ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಬಸವರಾಜ್ ಬೈಚಬಾಳ, ಕೃಷ್ಣ ಗುನ್ನಾಳಕರ, ಮಹೇಂದ್ರ ನಾಯಕ, ಸಂಜಯ ಪಾಟೀಲ್ ಕನಮಡಿ, ಚಿದಾನಂದ ಚಲವಾದಿ, ಸಂದೀಪ್ ಪಾಟೀಲ, ಶಿವರುದ್ರ ಬಾಗಲಕೋಟ, ಪಾಪುಸಿಂಗ್ ರಜಪೂತ, ಮಲ್ಲು ಕಲಾದಗಿ, ವಿಜಯ ಜೋಶಿ, ಚಿನ್ನು ಚಿನಗುಂಡಿ, ಕಾಂತು ಶಿಂಧೆ, ವಿನಾಯಕ್ ದಹಿಂಡೆ, ರಾಘವೇಂದ್ರ, ಅಶೋಕ ರಾಠೋಡ, ಶ್ರೀಧರ್ ಬಿಜ್ಜರಗಿ, ಗಿರೀಶ್ ಪಾಟೀಲ, ಆನಂದ್ ಮುಚ್ಚಂಡಿ, ಜಗದೀಶ್ ಮುಚ್ಚಂಡಿ, ಸಿದ್ದು ಮಲ್ಲಿಕಾರ್ಜುನ್ ಮಠ, ಸಂಗಮೇಶ್ ಹೌದೆ, ರಾಹುಲ್ ಜಾಧವ, ಅಪ್ಪು ಕುಂಬಾರ, ಬಸವರಾಜ ಹಳ್ಳಿ, ರಾಜಶೇಖರ ಬಾಗಲಕೋಟ್, ಗೇಸುರಾಜ್ ಇನಾಮದಾರ, ಗಣೇಶ್ ರಣದೇವಿ, ಲಖನ್ ದೇವಳ್ಳಿ, ಭರತ್ ಕೋಳಿ ಮತ್ತಿತರರಿದ್ದರು.