ಢವಳಗಿ ಸಮೀಪದ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಜೋಡೆತ್ತುಗಳಿಂದ ರಾಜ್ಯಮಟ್ಟದ ತೆರದ ಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬನಶಂಕರಿ ದೇವಿ ಪ್ರಸನ್ನ ಅವರಿಗೆ ಬೈಕ್ ವಿತರಿಸಲಾಯಿತು. ಜಾತ್ರೆ ಕಮಿಟಿ ಅಧ್ಯಕ್ಷ, ಸದಸ್ಯರು ಇದ್ದರು.
ಢವಳಗಿ: ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ಜಾತ್ರೆ ಮಹೋತ್ಸವ ನಿಮಿತ್ತ ಇತ್ತೀಚೆಗೆ ಜೋಡೆತ್ತುಗಳಿಂದ ರಾಜ್ಯಮಟ್ಟದ ತೆರದ ಬಂಡಿ ಸ್ಪರ್ಧೆಯಲ್ಲಿ ಬನಶಂಕರಿ ದೇವಿ ಪ್ರಸನ್ನ ಇಂಗಳಗಿ ಎತ್ತುಗಳು ಪ್ರಥಮ ಸ್ಥಾನ ಪಡೆದು ಬೈಕ್ ತನ್ನದಾಗಿಸಿಕೊಂಡವು.
ದ್ವಿತೀಯ ಸ್ಥಾನ ಬಂಗಾರಪ್ಪ ಪರಸಪ್ಪ ವಡ್ಡರ ರೂಡಗಿ ಎತ್ತುಗಳು, ತೃತಿಯ ಸ್ಥಾನ ಅವ್ವನಗೌಡ ಗ್ವಾತಗಿ ಬ್ಯಾಲ್ಯಾಳ ಎತ್ತುಗಳು ಪಡೆದುಕೊಂಡಿದ್ದು, ವಿಜೇತರಾದ ಒಟ್ಟು 20 ಜೋಡಿ ಎತ್ತುಗಳ ರೈತ ಪ್ರತಿನಿಽಗಳಿಗೆ ಬಹುಮಾನ ವಿತರಿಸಲಾಯಿತು. ಒಟ್ಟು 50 ಜೋಡಿ ಎತ್ತುಗಳ ಹೆಸರನ್ನು ನೋಂದಾಯಿಸಲಾಗಿತ್ತು. ಇದರಲ್ಲಿ 45 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು ಎಂದು ಜಾತ್ರೆ ಕಮಿಟಿ ಸದಸ್ಯ ಶ್ರೀಶೈಲ ಮೇಟಿ ಮಾಹಿತಿ ನೀಡಿದರು.
ವಿಜೇತರಿಗೆ ಕಮಿಟಿ ಅಧ್ಯಕ್ಷರು, ಸದಸ್ಯರು, ಬಹುಮಾನ ವಿತರಿಸಿ ಸನ್ಮಾನಿಸಿದರು. ರಾಜ್ಯಮಟ್ಟದ ತೆರದ ಬಂಡಿ ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.