ವಿಜಯಪುರ ನಗರದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಿತು. ಅಧ್ಯಕ್ಷೆ ಉಜ್ವಲಾ ಪಾಟೀಲ್, ಕುಲಪತಿ ವಿಜಯಾ ಬಿ ಕೋರಿಶೆಟ್ಟಿ, ಮಹಾನಂದ ಚಂದರಗಿ ಮತ್ತಿತರರಿದ್ದಾರೆ. 
ವಿಜಯಪುರ

ಲಿಂಗಾಧಾರಿತ ಹಿಂಸೆ ತಡೆಗೆ ಜಾಗೃತಿ , ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ನೇತೃತ್ವ ಬೃಹತ್ ಬೈಕ್ ಜಾಥಾ

ಪ್ರಮುಖ ಮುಖ್ಯಾಂಶಗಳು

  • ಮಹಿಳೆ ಮೇಲಿನ ಹಿಂಸಾಚಾರ ತಡೆಗೆ ಜಾಗೃತಿ
  • ಜಾಗತಿಕ ಅಭಿಯಾನ ದಂಗವಾಗಿ ಬೈಕ್ ಜಾಥಾ
  • ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ನೇತೃತ್ವ
  • ಲಿಂಗಾಧಾರಿತ ಹಿಂಸೆ ತಡೆಗೆ ಧ್ವನಿ
ವಿಜಯಪುರ: ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಜಾಗತಿಕವಾಗಿ ಹಮ್ಮಿಕೊಂಡಿರುವ ಅಭಿಯಾನದಂಗವಾಗಿ ಭಾನುವಾರ ಬೃಹತ್ ಬೈಕ್ ಜಾಥಾ ನಡೆಸಲಾಯಿತು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ, ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ನಾರ್ಥ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರ ವಿ ಕೇರ್ ಸಂಸ್ಥೆಗಳ ಸಹಯೋಗದಲ್ಲಿ ಈ ಜಾಥಾ ನಡೆಯಿತು. ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಬೈಕ್ ಜಾಥಾ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿ ಸಮಾಪ್ತಿಗೊಂಡಿತು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರದ ಅಧ್ಯಕ್ಷೆ ಉಜ್ವಲಾ ಪಾಟೀಲ್ ಮಾತನಾಡಿ, ಲಿಂಗಾಧಾರಿತ ಹಿಂಸಾಚಾರ ತಡೆಗಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ವಿಶ್ವಸಂಸ್ಥೆಯ ‘ಯುನೈಟ್ ಟು ಎಂಡ್ ವೈಲೆನ್ಸ್ ಅಗೆನೆಸ್ಟ್ ವುಮೆನ್ ಉಪಕ್ರಮದಡಿ ಈ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ವಿಜಯಾ ಬಿ ಕೋರಿಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಈ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಅವಶ್ಯ ಎಂದರು.
ಕೆಬಿಜೆಎನ್‌ಎಲ್ ಅಧಿಕಾರಿ ರಂಜಿತಾ ಕೆ ಆರ್ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕಿ ಮಹಾನಂದ ಚಂದರಗಿ, ಇನ್ನರ್ ವ್ಹೀಲ್ ಕ್ಲಬ್ ಆಫ್ ಬಿಜಾಪುರದ ನಾರ್ಥ್ ಅಧ್ಯಕ್ಷೆ ಶಶಿಕಲಾ ಅಪರಂಜಿ, ಕಾರ್ಯದರ್ಶಿ ರೇಖಾ ಕಲ್ಲೂರ ಮತ್ತಿತರರಿದ್ದರು.
ಡಾ. ಅಶ್ವಿನಿ ಹಿರೇಮಠ ವಂದಿಸಿದರು.