ವಿಜಯಪುರ  
ವಿಜಯಪುರ

ವರದಕ್ಷಿಣೆ ಪಿಡುಗು ನಿರ್ಮೂಲನೆ, ಜಾಗೃತಿ ಸಭೆ

ವಿಜಯಪುರ : ಇಲ್ಲಿನ ಸೋಲಾಪುರ ರಸ್ತೆಯ ಬಂಜಾರ ಕ್ರಾಸ್ ಬಳಿಯ ಬಂಜಾರಾ ಭವನದಲ್ಲಿ ಜೂ. 14ರಂದು ಬೆಳಗ್ಗೆ 10 ಗಂಟೆಗೆ ಬಂಜಾರಾ ಸಮಾಜದಲ್ಲಿನ ವರದಕ್ಷಿಣೆ ಪಿಡುಗು ನಿರ್ಮೂಲನೆ ಹಾಗೂ ಜಾಗೃತಿ ಸಭೆ ನಡೆಯಲಿದೆ.
ಬಂಜಾರಾ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಹೆಚ್ಚಾಗುತ್ತಿದೆ. ಅದರಿಂದ ಅನೇಕ ಬಡ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುತ್ತಿವೆ.
ಸಮಾಜದ ಗೌರವ, ಐಕ್ಯತೆ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಈ ಕೆಟ್ಟ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸದುದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟಿçÃಯ ಬಂಜಾರ ಪರಿಷದ್‌ನ ಅಧ್ಯಕ್ಷ ಪ್ರಕಾಶ ಚವಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.