ಆಲಮಟ್ಟಿ ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ ಅವರ ನೇತೃತ್ವದಲ್ಲಿ ಹೊರ ತಂದಿರುವ 2026ನೇ ಸಾಲಿನ ಅಸ್ಕಿ ಫೌಂಡೇಶನ್ ನೂತನ ವರ್ಷದ ಕ್ಯಾಲೆಂಡರನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಬುಡ್ಡೇಸಾಬ ಚಪ್ಪರಬಂದ, ಶ್ಯಾಮ ಪಾತ್ರದ, ಮುತ್ತಣ್ಣ ಮುತ್ತಣ್ಣವರ ಇತರರಿದ್ದರು.
ಅಸ್ಕಿ ಫೌಂಡೇಶನ್ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಫೌಂಡೇಶನ್ ಸಂಸ್ಥಾಪಕ ಸಿ.ಬಿ.ಅಸ್ಕಿ ಅವರು ಮಾನವೀಯ, ಅಂತಃಕರಣ ಹೃದಯವುಳ್ಳವರಾಗಿದ್ದಾರೆ. ಫೌಂಡೇಶನ್ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಮುದ್ದೇಬಿಹಾಳ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯ ಬುಡ್ಡೇಸಾಬ ಚಪ್ಪರಬಂದ ಹೇಳಿದರು.
ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ನೇತೃತ್ವದಲ್ಲಿ ಹೊರ ತಂದಿರುವ 2026ನೇ ಸಾಲಿನ ಅಸ್ಕಿ ಫೌಂಡೇಶನ್‌ದ ನೂತನ ವರ್ಷದ ಕ್ಯಾಲೆಂಡರ್ ನ್ನು ಶನಿವಾರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತ ಸಂಘದ ಮುಖಂಡ ಬಸವರಾಜ ಬಾಗೇವಾಡಿ ಮಾತನಾಡಿ, ಅಸ್ಕಿ ಫೌಂಡೇಶನ್ ಜನಸೇವೆ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಖಂಡ ಅಸ್ಕಿ ಅವರಿಗೆ ಜನಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ಫೌಂಡೇಶನ್ ಸದಾ ಮುಂದೆ ಇರಲಿದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಶ್ಯಾಮ ಪಾತ್ರದ, ಟಿಎಪಿಸಿಎಂಎಸ್ ನಿರ್ದೇಶಕ ಮುತ್ತಣ್ಣ ಮುತ್ತಣ್ಣವರ, ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಬಿ. ಸಂಗಮ, ವೈ.ವೈ. ಬಿರಾದಾರ, ಹಣಮಂತ ಪೂಜಾರಿ (ಕಾಶಿನಕುಂಟಿ), ಬಿ.ಎಸ್. ಪಾಟೀಲ, ಬಸವರಾಜ ದಂಡಿನ, ಶಿವು ಗದಿಗೆಪ್ಪಗೌಡರ, ಯುವ ಕಾಂಗ್ರೆಸ್ ಮುಖಂಡ ಆಸಿಫ್ ಬಿಲಕೇರಿ, ಅಸ್ಕಿ ಫೌಂಡೇಶನ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಶ್ರೀಧರ ಬಿರಾದಾರ, ಸಚಿನ ನಾಡಗೌಡ, ರಾಮನಗೌಡ ಹೊಸಮನಿ, ಮಲ್ಲು ಢವಳಗಿ ಸೇರಿ ಯಲಗೂರ, ಕಾಶಿನಕುಂಟಿ, ಬೂದಿಹಾಳ, ಗ್ರಾಮದ ಗಣ್ಯರು ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು.