ಇಂಡಿ ನಗರದ ಜಿ.ಆರ್. ಗಾಂಧಿ ಕಲಾ ಪದವಿ ಮಹಾವಿದ್ಯಾಲಯದಲ್ಲಿ `ಮನ ಮನಕೆ ಮನೆ ಮನೆಗೆ ಡಾ. ಬಾಬಾ ಸಾಹೇಬರ ಅಭಿಯಾನ' ದಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಶ್ರೀಶೈಲ ಸಣ್ಣಕ್ಕಿ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಽಕಾರಿ ಪಿ.ಕೆ. ರಾಠೋಡ, ಸಹಾಯಕ ಪ್ರಾಧ್ಯಾಪಕ ವಿಶ್ವಾಸ ಕೋರವಾರ ಇತರರಿದ್ದರು. 
ವಿಜಯಪುರ

ಅಂಬೇಡ್ಕರ್ ತತ್ವಾದರ್ಶ ಅನುಕರಣೀಯ

ಇಂಡಿ:ಆಧುನಿಕ ಭಾರತದ ನಿರ್ಮಾತೃ ಷೋಷಿತ ಸಮುದಾಯಗಳಿಗಾಗಿ ಶ್ರಮಿಸಿದ ಡಾ. ಅಂಬೇಡ್ಕರ ಅವರ ವಿಚಾರ ಧಾರೆ ಹಾಗೂ ತತ್ವಗಳನ್ನು ಮನೆ ಮನಕೆ ತಲುಪಿಸಬೇಕಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀಶೈಲ ಸಣ್ಣಕ್ಕಿ ಹೇಳಿದರು.
ನಗರದ ಜಿ.ಆರ್. ಗಾಂಽ ಕಲಾ, ವೈ.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ `ಮನ ಮನಕೆ ಮನೆ ಮನೆಗೆ ಡಾ. ಬಾಬಾ ಸಾಹೇಬರ ಅಭಿಯಾನ'ದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪಿ.ಕೆ. ರಾಠೋಡ, ಸಹಾಯಕ ಪ್ರಾಧ್ಯಾಪಕರು ವಿಶ್ವಾಸ ಕೋರವಾರ, ಸುರೇಂದ್ರ ಕೆ, ಎಸ್.ಬಿ. ಜಾಧವ, ಸಿ.ಎಸ್. ಬಿರಾದಾರ, ಜಯಪ್ರಸಾದ ಡಿ., ಶ್ರೀಕಾಂತ ರಾಠೋಡ, ಎಮ್.ಆರ್. ಕೋಣದೆ, ಗ್ರಂಥಪಾಲಕ ಆರ್.ಪಿ. ಇಂಗನಾಳ ಪರಶುರಾಮ ಅಜಮನಿ, ದಾನಮ್ಮ ಪಾಟೀಲ, ಐಶ್ವರ್ಯ ಕಕ್ಕಳಮೇಲಿ, ಸುಶ್ಮಿತಾ ಕಾರಜೋಳ, ವೇದಶ್ರೀ ತುಪ್ಪದ, ಬಂದೆನವಾಜ ಅಗರಖೇಡ, ಸನಾ ಜಮಾದಾರ, ಸಕುಬಾಯಿ ಗುರಾಣಿ ಮತ್ತಿತರಿದ್ದರು.