ವಿಜಯಪುರದ -ಫ.ಗು. ಹಳಕಟ್ಟಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ 1998 ರಿಂದ 2001 ಬ್ಯಾಚಿನ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ನಡೆಯಿತು. 
ವಿಜಯಪುರ

ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ

ಗಿರೀಶ ಸಗರ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ -ಫ.ಗು. ಹಳಕಟ್ಟಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜನಿಯರಿAಗ್ ವಿಭಾಗದಲ್ಲಿ ಇತ್ತೀಚೆಗೆ 1998 ರಿಂದ 2001 ಬ್ಯಾಚಿನ ಮೆಕ್ಯಾನಿಕಲï, ಅಟೋಮೊಬೈಲ್, ಇಂಡಸ್ಟಿçಯಲ್ ಪ್ರೊಡಕ್ಷನ್ ವಿಭಾಗದ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು 100 ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊAಡು, ವೃತ್ತಿ ಜೀವನದ ಸವಾಲುಗಳು ಸಾಧನೆಗಳು ಹಾಗು ಕೈಗಾರಿಕಾ ವೃತ್ತಿಪರ ಅನುಭವಗಳ ಕುರಿತು ಸದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಲ್ಲದೆ, ಬಿಎಲï‌ಡಿಇ ಇಂಜನಿಯರಿಂಗ್ ಕಾಲೇಜಿನಲ್ಲಾದ ಬೆಳವಣಿಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖವಾಗಿ ಟೊಯೋಟಾ ಇಂಜಿನಿಯರಿಂಗ್‌ನಲ್ಲಿ ಶ್ರೇಷ್ಠತೆಯ ಕೇಂದ್ರ, ಕಂಪನ ಮತ್ತು ಶಕ್ತಿ ಕೊಯ್ಲು ಕ್ಷೇತ್ರದಲ್ಲಿ ಶ್ರೇಷ್ಠತೆಯ ಕೇಂದ್ರ, ಐಸಿ ಎಂಜಿನ್‌ನಲ್ಲಿ ಶ್ರೇಷ್ಠತೆಯ ಕೇಂದ್ರ, ಉಡುಗೆ ಮತ್ತು ಘರ್ಷಣೆ ಪರೀಕ್ಷೆಯಲ್ಲಿ ಶ್ರೇಷ್ಠತೆಯ ಕೇಂದ್ರ, 3ಡಿ ಮುದ್ರಣದಲ್ಲಿ ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ ಹಾಗೂ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರಯೋಗಾಲಯಗಳು ಸೂಕ್ತ ಕಲಿಕಾ ವಾತಾವರಣವಿರುವ ವಿದ್ಯಾಲಯದ ಆವರಣವನ್ನು ಮೆಚ್ಚಿ ಮುಂದೆ ನಮ್ಮ ಮಕ್ಕಳೂ ಇಲ್ಲಿಯೇ ವ್ಯಾಸಂಗ ಮುಂದುವರಿಸಲಿ ಎಂಬ ಇಚ್ಛೆ ವ್ಯಕ್ತಪಡಿಸಿದರು. ವಿಭಾಗ ಮುಖ್ಯಸ್ಥ ಆರ್.ಎನ್. ಜೀರಗಾಳ ಮಾತನಾಡಿದರು.