ವಿಜಯಪುರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರಿಗಾಗಿ ಎಐ ಸಾಮಗ್ರಿ ಎಂಬ ಕಾರ್ಯಾಗಾರದಲ್ಲಿ ಶರಣಬಸಪ್ಪ ಸಜ್ಜನ ಉಪನ್ಯಾಸ ನೀಡಿದರು. ಎಸ್.ಬಿ. ಕಮತಿ, ವಿನಯ ದರ್ಬಿ ಮತ್ತಿತರರಿದ್ದಾರೆ.
ಎಐ ಎಂಬುದು ಒಂದು ಪರಿಣಾಮಕಾರಿ ತಂತ್ರವಾಗಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಆವರಿಸಿಕೊಂಡಿದ್ದು, ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅನುಕರಿಸುವ ತಂತ್ರe್ಞÁನವೇ ಕೃತಕ ಬುದ್ಧಿಮತ್ತೆ (ಎಐ) ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಸಜ್ಜನ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಬಿಸಿಎ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರಿಗಾಗಿ ಎಐ ಸಾಮಗ್ರಿ ಎಂಬ ಕಾರ್ಯಾಗಾರದಲ್ಲಿ ಕಲಿಕೆ ಮತ್ತು ಕಲಿಸುವಲ್ಲಿ ಎಐನ ಪರಿಣಾಮದ ಕುರಿತು ಅವರು ಉಪನ್ಯಾಸ ನೀಡಿದರು.
ಎಐ ಒಂದು ಸಹಾಯಕ ಸಾಧನವಾಗಿದೆ. ಮನುಷ್ಯನಿಗೆ ಪರ್ಯಾಯವಲ್ಲ ಎಐನಿಂದ ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಸಾದಕತೆಯನ್ನು ಮತ್ತಷ್ಟು ಹೆಚ್ಚಿಸಬಹುದಾಗಿದ್ದು, ಎಐ ತಂತ್ರe್ಞÁನವು ಶಿಕ್ಷಕರನ್ನು ಬದಲಿಸುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಅದು ಶಿಕ್ಷಕರಿಗೆ ಬೋಧನೆಯಲ್ಲಿ ಸಹಾಯವಾಗಿ ಕಾರ್ಯನಿರ್ವಹಿಸುವ ಸಾಧನ. ಕಲಿಕೆ, ಅಧ್ಯಯನ, ಸಂಶೋಧನೆ ಮತ್ತು ಕೌಶಲ ಅಭಿವೃದ್ಧಿಗೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ. ಕಮತಿ ಮಾತನಾಡಿ, ಚಾಟ್ ಜಿಪಿಟಿ, ಗೂಗಲï ಜಮಿನಿ, ಕ್ಲೌಡ್ ಎಐ, ಗೂಗಲï ನೋಟ್ ಬುಕ್ ಎಐ ಮುಂತಾದವುಗಳು ಎಐ ಆಧಾರಿತ ಸಾಮಗ್ರಿಗಳಾಗಿವೆ. ಸಮಯ ಉಳಿಸಲು, ವೇಗವಾಗಿ ಕಲಿಯಲು, ಉತ್ತಮವಾಗಿ ಸಂವಹನ ಮಾಡಲು, ಹೊಸ ಆಲೋಚನೆಗಳನ್ನು ಸೃಷ್ಟಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯಮಾಡುವ ಸಾಧನವೇ ಎಐ ಎಂದು ಹೇಳಿದರು.
ಸುಷ್ಮಾ ಅರವತ್ತು ಪ್ರಾರ್ಥಿಸಿದರು. ಶ್ರೀದೇವಿ ಭೈರೊಡಗಿ ಸ್ವಾಗತಿಸಿದರು. ವೀಣಾ ಮೋರೆ ಪರಿಚಯಿಸಿದರು. ಚಿದಾನಂದ ನಾವಿ ನಿರೂಪಿಸಿದರು. ಭಾರತಿ ನಾಯಕವಾಡಿ ವಂದಿಸಿದರು.
ಐಕ್ಯೂಎಸಿ ಸಂಯೋಜಕ ವಿನಯ ದರ್ಬಿ, ಪ್ರ-ÀÅಲï ಹಕ್ಕಾಪಕ್ಕಿ, ರಾಘವೇಂದ್ರ ಕುಲಕರ್ಣಿ, ವಿನಯ ಚಿಕ್ಕರೆಡ್ಡಿ, ಬಿ.ಸಿ. ಪಾಟೀಲ, ಕೃತಿಕಾ ಸಿರ್ಕೆ, ಭಾರತಿ ಮಠ ಮತ್ತಿತರರಿದ್ದರು.