ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಡಾ. ಸಂಜೀವ ಸಜ್ಜನರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾದೇವ ಹಾಲಳ್ಳಿ, ಬಿ.ಎಸ್. ಸಜ್ಜನ, ಸುಭಾಷ ಬೆಟಗೇರಿ ಮತ್ತಿತರರಿದ್ದಾರೆ.
ವಿಜಯಪುರ: ಹೃದಯ ಮಾನವನ ಬದುಕಿನುದ್ದಕ್ಕೂ ಕಾರ್ಯ ನಿರ್ವಹಿಸುವ ಅತ್ಯಂತ ಪ್ರಮುಖ ಅಂಗವಾಗಿದೆ. ಆರೋಗ್ಯಕರ ಜೀವನ ಕ್ರಮ ಅಳವಡಿಸಿಕೊಳ್ಳುವುದರಿಂದ ಹೃದಯ ಕಾಯಿಲೆಗಳಿಂದ ದೂರವಿರಬಹುದಾಗಿದೆ ಎಂದು ಡಾ. ಸಂಜೀವ ಸಜ್ಜನರ ಹೇಳಿದರು.
ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆ, ಅಽಕ ರಕ್ತದೊತ್ತಡ, ಕೊಲೆಸ್ಟಾçಲ್ ಹೆಚ್ಚಳ, ಸಕ್ಕರೆ ಕಾಯಿಲೆ, ಅಽಕ ದೇಹ ತೂಕ, ನಿಯಮಿತ ವ್ಯಾಯಾಮ ಮಾಡದೇ ಇರುವುದರಿಂದ ಹೃದಯ ರೋಗಗಳ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಆರೋಗ್ಯಕರ ಜೀವನ ಕ್ರಮ ಅಳವಡಿಸಿಕೊಳ್ಳಬೇಕು. ಹಿರಿಯ ನಾಗರಿಕರು ಆರು ತಿಂಗಳಿಗೊಮ್ಮೆ ಆದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾದೇವ ಹಾಲಳ್ಳಿ ಮಾತನಾಡಿ, ವೈದ್ಯರ ಸಲಹೆಯಂತೆ ಆರೋಗ್ಯಕರ ಆಹಾರ, ವಿಹಾರ, ವ್ಯಾಯಾಮ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಆರೋಗ್ಯವಾಗಿರೋಣ ಎಂದರು.
ಬಿ.ಎಸ್. ಸಜ್ಜನ ಪ್ರಾರ್ಥಿಸಿದರು. ಸುಭಾಷ ಬೆಟಗೇರಿ ಸ್ವಾಗತಿಸಿದರು. ಎಸ್.ಸಿ. ಹಿರೇಮಠ ನಿರೂಪಿಸಿದರು. ಜಗದೀಶ ಮೋಟಗಿ ವಂದಿಸಿದರು.
ಶಶಿಧರ ಶಿರಹಟ್ಟಿ, ಎಸ್.ಜಿ. ನಾಡಗೌಡರ, ಎ.ಎಂ. ಸಾವಳಗಿ, ಈರಣ್ಣ ಸೊನ್ನಗಿ, ಅಶೋಕ ಉಪಾಧ್ಯಾಯ, ವಿಠ್ಠಲ ಕಾಳೆ, ಆರ್.ಜಿ. ಬ್ಯಾಕೋಡ, ಈರಣ್ಣ ಚಿಮ್ಮಲಗಿ, ಸುಭಾಷ ಗಜಕೋಶ, ಗುರಲಿಂಗಪ್ಪ ಬಿರಾದಾರ,ಮತ್ತಿತರರಿದ್ದರು.
ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಪುಷ್ಪ ನೀಡಿ ಶುಭಾಶಯ ಕೋರಲಾಯಿತು.