ಬಸವನಬಾಗೇವಾಡಿ ಪಟ್ಟಣದ ವಿಜಯಪುರ ರಸ್ತೆಯ ಬಸವೇಶ್ವರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಬಸವಸೈನ್ಯ ಹಾಗೂ ಗೆಳೆಯರ ಬಳಗ ಆಯೋಜಿಸಿದ್ದ ಬಸವನಬಾಗೇವಾಡಿ ಪ್ರಿಮಿಯರ್ ಲೀಗ್ ೨೦೨೬ ಸೀಜನ್-೧ ಕ್ರಿಕೆಟ್‌ ಟೊರ್ನಾಮೆಂಟ್‌ಗೆ ಚಾಲನೆ ನೀಡಿದರು. ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ, ಸುರೇಶ ಹಾರಿವಾಳ, ಡಾ. ಬಸವರಾಜ ಕೋಟಿ ಇತರರಿದ್ದರು. 
ವಿಜಯಪುರ

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಬಸವನಬಾಗೇವಾಡಿ: ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಜನಪರ, ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ನಿರಂತರವಾಗಿ ಉತ್ತೇಜನ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ. ಬಸವ ಜಯಂತಿ ನಿಮಿತ್ತ ಯುವಶಕ್ತಿ ಒಗ್ಗೂಡಿಸಲು ಕ್ರಿಕೇಟ್ ಪಂದ್ಯಾವಳಿ ಪೂರಕ ಎಂದು ಬಿಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಬಸವೇಶ್ವರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಬಸವಸೈನ್ಯ ಹಾಗೂ ಗೆಳೆಯರ ಬಳಗ ಆಯೋಜಿಸಿದ್ದ ಬಸವನಬಾಗೇವಾಡಿ ಪ್ರಿಮಿಯರ್ ಲೀಗ್ ೨೦೨೬ ಸೀಜನ್-೧ರ ಕ್ರಿಕೆಟ್ ಟೊರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ಮನುಷ್ಯನ ಮಾನಸಿಕ, ದೈಹಿಕ, ಆರೋಗ್ಯಕ್ಕೆ ಸಹಕಾರ. ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಹೇಳಿದರು.
ಪಿಎಲï‌ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕ್ರೀಡಾಪಟುಗಳು ಶಿಸ್ತು ಮತ್ತು ಕ್ರೀಡಾ ಸೂರ್ತಿಯಿಂದ ಆಟವಾಡಬೇಕು ಎಂದು ಹಾರೈಸಿದರು.
ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಮಾತನಾಡಿ, ಬಸವನಬಾಗೇವಾಡಿ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಮತ್ತು ಕ್ರೀಡೆಯ ಮೂಲಕ ಯುವಕರಲ್ಲಿ ಒಗ್ಗಟ್ಟು ಹಾಗೂ ಸಾಮಾಜಿಕ ಸೌಹಾರ್ದತೆ ಬೆಳೆಸುವುದು ನಮ್ಮ ಸಂಘಟನೆ ಮುಖ್ಯ ಉದ್ದೇಶ. ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಅತ್ಯುತ್ತಮ ಪ್ರದರ್ಶನ ನೀಡಲಿ ಎಂದರು.
ಸಾನ್ನಿಧ್ಯ ವಹಿಸಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಡಾ. ಬಸವರಾಜ ಕೋಟಿ, ಜಟ್ಟಿಂಗರಾಯ ಮಾಲಗಾರ, ರವಿ ರಾಠೋಡ, ಪ್ರಶಾಂತ ಮುಂಜಾನೆ, ಮಾಂತೇಶ ಪಾರಶೆಟ್ಟಿ, ಶಾನನವಾಜ ಮುಲ್ಲಾ ಇತರರಿದ್ದರು. ಶಿಕ್ಷಕ ಶಿವು ಮಡಿಕೇಶ್ವರ ನಿರೂಪಿಸಿದರು.