ವಿಜಯಪುರ ನಗರದ ಬಿಎಲïಡಿಇ ಡೀಮ್ಡï ವಿಶ್ವವಿದ್ಯಾಲಯ ಮತ್ತು ಅಮೇರಿಕದ ಯುನಿವರ್ಸಿಟಿ ಆ-ï ಇಲಿನಾಯಿಸ್ ಚಿಕ್ಯಾಗೊ ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಬಿಎಲïಡಿಇ ಡೀಮ್ಡï ವಿವಿ ಕುಲಪತಿ ಅರುಣ ಇನಾಮದಾರ, ಇಲಿನಾಯಿಸ್ ವಿವಿಯ ಪ್ರಭಾಕರ ಬೆಳ್ಳೂರ ಇದ್ದಾರೆ.
ವಿಜಯಪುರ : ನಗರದ ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯ ಮತ್ತು ಅಮೇರಿಕದ ಯುನಿವರ್ಸಿಟಿ ಆ-ï ಇಲಿನಾಯಿಸ್ ಚಿಕ್ಯಾಗೊ ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಇನಾಮದಾರ ಅವರು ಅಮೇರಿಕಕ್ಕೆ ತೆರಳಿದ್ದರು. ಅಲ್ಲಿ ಇಲಿನಾಯಿಸ್ ವಿಶ್ವವಿದ್ಯಾಲಯ, ಚಿಕ್ಯಾಗೊ ಅಂತಾರಾಷ್ಟಿçÃಯ ಆರೋಗ್ಯ ವಿಭಾಗದ ಅಸೋಶಿಯೇಟ್ ಡೀನ್ ಡಾ. ಪ್ರಭಾಕರ ಬೆಳ್ಳೂರ ಅವರೊಂದಿಗೆ ಈ ಒಡಂಬಡಿಕೆ ಕುರಿತು ಚರ್ಚಿಸಿದ್ದರು. ಸದ್ಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯಿAದಾಗಿ ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲಿವೆ.
ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯದ ಕುಲಾಽಪತಿ ಬಸನಗೌಡ ಪಾಟೀಲ, ಸಮಕುಲಾಽಪತಿ ವೈ.ಎಂ. ಜಯರಾಜ, ಕುಲಸಚಿವ ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಮಹವಿದ್ಯಾಲಯದ ಪ್ರಾಚಾರ್ಯೆ ತೇಜಸ್ವಿನಿ ವಲ್ಲಭ ಅವರ ಮಾರ್ಗದರ್ಶನದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಈ ಒಡಂಬಡಿಕೆ ಜಾರಿಗೆ ಬಂದಿದೆ. ಅದರಂತೆ ಬಿಎಲïಡಿಇ ಸಂಸ್ಥೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅನುಭವ ಮತ್ತು ಜಾಗತಿಕ ಮಟ್ಟದ ಪರಿಚಯ ಪಡೆಯಲು ಹೊಸ ಅವಕಾಶಗಳು ದೊರೆಯಲಿವೆ.
ಸದ್ಯ ಇಂಟರ್ನ್ ಆಗಿರುವ ವಿದ್ಯಾರ್ಥಿನಿ ಮೇಘನಾ ಅವರು ಯುನಿವರ್ಸಿಟಿ ಆ-ï ಇಲಿನಾಯಿಸ್ ಚಿಕಾಗೊನಲ್ಲಿ ನ್ಯೂರೋಸರ್ಜರಿ ವಿಭಾಗದಲ್ಲಿ ಎಲೆಕ್ಟಿವ್ ತರಬೇತಿಗೆ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಇಂತಹ ಅಂತಾರಾಷ್ಟಿçÃಯ ಶೈಕ್ಷಣಿಕ ಸಹಕಾರಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದ್ದು, ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆಗೆ ನೆರವಾಗಲಿವೆ ಎಂದು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಡೀನ್ ಡಾ. ಎಂ.ಎA. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.