ಸಿಂದಗಿ ನಗರದ ಟಿಎಸ್‌ಪಿಎಸ್ ಮಂಡಳಿಯ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಽÃಶ ನಾಗೇಶ ಮೊಗೇರ ಉದ್ಘಾಟಿಸಿದರು. ನ್ಯಾಯಾಽÃಶೆ ಪಂಕಜಾ ಕೊಣ್ಣೂರ, ಶಾಸಕ ಅಶೋಕ ಮನಗೂಳಿ ಮತ್ತಿತರರಿದ್ದರು. 
ವಿಜಯಪುರ

ವೃತ್ತಿಶೀಲ ಬದುಕು ಸಾಧನೆಗೆ ಸಾಧ್ಯ

ಸಿಂದಗಿ: ವಕೀಲರು ಅಧ್ಯಯನದೊಂದಿಗೆ ವೃತ್ತೀಶೀಲ ಬದುಕು ಕಟ್ಟಿಕೊಂಡರೆ ಸಾಧನೆ ಸಾಧ್ಯ ಎಂದು ನಗರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧಿಶ ನಾಗೇಶ ಮೊಗೇರ ಹೇಳಿದರು.
ನಗರದ ಟಿಎಸ್‌ಪಿಎಸ್ ಮಂಡಳಿಯ ಸೆಮಿನಾರ್ ಹಾಲ್‌ನಲ್ಲಿ, ಕಾನೂನು ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು, ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಹಾಗೂ ವಿದ್ಯಾರ್ಥಿ ಒಕ್ಕೂಟ, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವಕೀಲರು ಪಾಲ್ಗೊಂಡಿದ್ದರು. ಅಲ್ಲದೆ, ಹಾಲಿ ಸಿಎಂ ಸಿದ್ದರಾಮಯ್ಯ ಸೇರಿ ಬಹುತೇಕರು ರಾಜಕಾರಣದಲ್ಲಿ ತಮ್ಮದೇ ಆದ ಸಾಧನೆ ತೋರಿದ್ದಾರೆ ಎಂದರು.
ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಶ್ರೇಷ್ಠತೆ ಇದೆ. ಪ್ರಜಾಪ್ರಭುತ್ವದ ಏಳಿಗೆಯಲ್ಲಿ, ಜನಸಾಮಾನ್ಯರಿಗೂ, ಪ್ರಧಾನಿಗೂ ಒಂದೇ ನ್ಯಾಯ ನೀಡುವ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ಇಂತಹ ಕಾನೂನಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನಮ್ಮ ತಂದೆ ದಿ.ಎಂ.ಸಿ. ಮನಗೂಳಿ ಅವರು ಕಾನೂನು ಕಾಲೇಜು ತೆರೆಯುವ ಕನಸು ಇಂದು ನನಸಾಗಿದೆ ಎಂದರು.
ಅಪರಾಧ ವಿಭಾಗದ ಪಿಎಸ್‌ಐ ಎಸ್.ಎಸ್. ತಳವಾರ ಉಪನ್ಯಾಸ ನೀಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಅಪಘಾತ, ಅದರಿಂದಾಗುವ ಸಾವು-ನೋವುಗಳಿಗೆ ಕಡಿವಾಣ ಹಾಕಬಹುದು. ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ನಿಯಮ ಉಲ್ಲಂöಸಿದರೆ ದಂಡ ಹಾಗೂ ಕಾರಾಗೃಹ ವಾಸವನ್ನೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟಿಎಸ್‌ಪಿಎಸ್ ಮಂಡಳಿ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಗುಂದಗಿ, ಅಪರ ಸರ್ಕಾರಿ ವಕೀಲ ಬಿ.ಜಿ. ನೆಲ್ಲಗಿ ಮತ್ತಿತರರಿದ್ದರು.
"

ಕಾನೂನು ಪದವಿಯನ್ನು ಸಾಮಾನ್ಯ ಜ್ಞಾನದಂತೆ ಅರಿತು ಜನಸಾಮಾನ್ಯರಿಗೂ ಅದರ ತಿಳುವಳಿಕೆ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು.

"

ರಾಜ್ಯದಲ್ಲಿ 21 ಸಾವಿರಕ್ಕೂ ಹೆಚ್ಚು ಅಪಘಾತಗಳ ವರದಿಯಿದೆ. ಯುವಕರು ವೇಗದ ಇತಿ-ಮಿತಿಯಲ್ಲಿಯೇ ವಾಹನಗಳನ್ನು ಚಲಾಯಿಸಬೇಕು. ಅಪಘಾತ ಜಾಗೃತಿಯಲ್ಲಿ ಪಾಲ್ಗೊಂಡು, ರಸ್ತೆ ಸುರಕ್ಷಾ ಸಪ್ತಾಹದ ಅರಿವು ಮೂಡಿಸಬೇಕು.