ಸುಕ್ಷೇತ್ರ ಇಂಚಗೇರಿ ಮಠದ ಮಹಾದ್ವಾರದ ಬಸ್ ನಿಲ್ದಾಣದ ಬಳಿ ಕುಡಿಯುವ ನೀರಿನ ಅರವಟ್ಟಿಗೆಗೆ ಮತ್ತು ಶ್ರೀ ಮಠದ ಗುರು ಮಹಾರಾಜರ ಭಾವಚಿತ್ರಕ್ಕೆ ಗ್ರಾಮದ ಯುವ ಮುಖಂಡ ದಯಾನಂದ ಏಳಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಆರ್.ಡಿ. ಬಿರಾದಾರ, ಎಸ್.ಎಂ. ಹದಿಮೂರು, ಮಲ್ಲಪ್ಪ ಪಾಟೀಲ, ರಾಜು ಕನಮಡಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇತರರಿದ್ದರು. 
ವಿಜಯಪುರ

ಕುಡಿಯುವ ನೀರಿನ ಅರವಟ್ಟಿಗೆ ಪುಣ್ಯದ ಕಾರ್ಯ

ಗಿರೀಶ ಸಗರ
ಹೊರ್ತಿ : ಬೇಸಿಗೆಯಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಇಟ್ಟು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತಿರುವುದು ಪುಣ್ಯದ ಕೆಲಸ ಎಂದು ಸದ್ಗುರು ಮಾಧವಾನಂದ ಪ್ರಭುಜಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್. ದಿ. ಬಿರಾದಾರ ಹೇಳಿದರು.
ಇಂಚಗೇರಿ ಮಠದ ಮಹಾದ್ವಾರದ ಬಸ್ ನಿಲ್ದಾಣದ ಬಳಿ ಕುಡಿಯುವ ನೀರಿನ ಅರವಟ್ಟಿಗೆಗೆ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕುಡಿಯುವ ನೀರಿನ ಅರವಟ್ಟಿಗೆಗೆ ಮತ್ತು ಶ್ರೀ ಮಠದ ಗುರು ಮಹಾರಾಜರ ಭಾವಚಿತ್ರಕ್ಕೆ ಗ್ರಾಮದ ಯುವ ಮುಖಂಡ ದಯಾನಂದ ಏಳಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಎಸ್.ಎಂ. ಹದಿಮೂರು, ಮಲ್ಲಪ್ಪ ಪಾಟೀಲ, ರಾಜು ಕನಮಡಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇತರರಿದ್ದರು.