ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಹಕಾರಿ ರಂಗದ ದಿಗ್ಗಜ ಕೆ.ಎಚ್. ಪಾಟೀಲರ ೧೦೨ನೇ ಜಯಂತ್ಯುತ್ಸವ ಆಚರಿಸಲಾಯಿತು. ಕುಮಾರ ದೇಸಾಯಿ, ಈರಣಗೌಡ ನ್ಯಾಮಗೌಡರ, ಅದೃಶ್ಯಪ್ಪ ದೇಸಾಯಿ ಮತ್ತಿತರರಿದ್ದಾರೆ.
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಹಕಾರಿ ರಂಗದ ದಿಗ್ಗಜ, ಮಾಜಿ ಸಚಿವ ದಿ. ಕೆ.ಎಚ್. ಪಾಟೀಲರ ೧೦೨ನೇ ಜಯಂತ್ಯುತ್ಸವ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಖಾನೆ ಆಡಳಿತ ಕಚೇರಿಯಲ್ಲಿರುವ ಕೆ.ಎಚ್. ಪಾಟೀಲರ ಪ್ರತಿಮೆಗೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ ಹಾಗೂ ನಿರ್ದೇಶಕ ಈರಣಗೌಡ ನ್ಯಾಮಗೌಡರ ಪುಷ್ಪಾರ್ಚನೆ ನೆರವೇರಿಸಿದರು.
ಅಧ್ಯಕ್ಷ ಕುಮಾರ ದೇಸಾಯಿ ಮಾತನಾಡಿ, ಕೆ.ಎಚ್. ಪಾಟೀಲರು ಶ್ರೇಷ್ಠ ಆಡಳಿತಗಾರ, ಚಿಂತಕ, ದೂರದೃಷ್ಟಿಯ ಜನನಾಯಕ, ಗ್ರಾಮೀಣ ಭಾಗದ ಎಲ್ಲ ಸಮಾಜದ ಶ್ರೇಯೋಭಿವೃದ್ಧಿ ಕನಸುಗಾರರಾಗಿ ಅನೇಕ ಸಹಕಾರ ರಂಗದಲ್ಲಿ ಕಾರ್ಯ ಮಾಡಿದವರಾಗಿದ್ದಾರೆ. ಅಲ್ಲದೇ. ಅಂದಿನ ಕಾಲದಲ್ಲಿ ಖಾಸಗಿ ವ್ಯಾಪಾರಿ ಕುಟುಂಬಗಳ ಮಾಲೀಕತ್ವದ ಕೈಗಾರಿಕೆಗಳ ಕಲರವ ನಡುವೆಯೇ ಗದಗ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸಾಯಿಟಿ ಎಂಬ ಹೆಸರಿನಲ್ಲಿ ಸಹಕಾರಿ ವಲಯದ ಉತ್ಪಾದನಾ ಚಟುವಟಿಕೆ ಪ್ರಾರಂಭಿಸಿ ಜನ ಸಾಮಾನ್ಯರ ಪಾಲುಗಾರಿಕೆಯ ಉದ್ದಿಮೆ ಶೀಲತೆಯನ್ನು ನಾಡಿಗೆ ಪರಿಚಯಿಸಿದವರು ಎಂದು ತಿಳಿಸಿದರು.
ಅದೃಶ್ಯಪ್ಪ ದೇಸಾಯಿ, ಗೌಡಪ್ಪ ಕೋಣಪ್ಪನವರ, ರಮೇಶ ಜಕರಡ್ಡಿ, ಮಲ್ಲಪ್ಪ ಮಾದರ, ಸೋಮನಗೌಡ ಪಾಟೀಲ, ಹಣಮಂತ ಕೊಣ್ಣೂರ, ಸಂಜಯಗೌಡ. ಪಾಟೀಲ, ಶರಶ್ಚಂದ್ರ (ಕುಮಾರ) ಪಾಟೀಲ, ಗುರಲಿಂಗಪ್ಪ ಅಂಗಡಿ, ಶ್ರೀನಿವಾಸ ನಿಡೋಣಿ, ವ್ಯವಸ್ಥಾಪಕ ನಿರ್ದೇಶಕಿ ಎಸ್.ಕೆ. ಭಾಗ್ಯಶ್ರೀ ಮತ್ತಿತರರಿದ್ದರು.