ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಹ.ಮ. ಪೂಜಾರ, ಡಾ. ವಿ.ಡಿ. ಐಹೊಳ್ಳಿ, ಎಸ್.ಎಸ್. ಸಾತಿಹಾಳ ಮತ್ತಿತರರಿದ್ದಾರೆ. 
ವಿಜಯಪುರ

ಮಕ್ಕಳ ಮನಸ್ಸು ಬಿಳಿಯ ಹಾಳೆ

ವಿಜಯಪುರ : ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದಂತೆ. ಅದರ ಮೇಲೆ ನಾವು ಏನನ್ನು ಮೂಡಿಸುತ್ತೇವೆಯೋ ಅದು ಮೂಡುತ್ತದೆ. ಹೀಗಾಗಿ, ಮಕ್ಕಳಿಗೆ ಒಳ್ಳೆಯ ಆಲೋಚನೆ, ಚಿಂತನೆ, ಕಲ್ಪನೆಗಳು ಮೂಡಿಬರುವ ನಿಟ್ಟಿನಲ್ಲಿ ನಮ್ಮ ಚಿಂತನೆಗಳಿರಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ. ಪೂಜಾರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಕಸಾಪ ಜಿಲ್ಲೆ ಮತ್ತು ಸಿಂದಗಿ ತಾಲೂಕು ಕಸಾಪ ಘಟಕಗಳ ಸಹಯೋಗದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಾಧಾನ್ಯತೆ ನೀಡುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಗೌರವ ಸಲಹೆಗಾರ ಡಾ. ವಿ.ಡಿ. ಐಹೊಳ್ಳಿ ಮಾತನಾಡಿ, ಜಿಲ್ಲಾ ಕಸಾಪ ಘಟಕವು ನಿರಂತರವಾಗಿ ಕನ್ನಡ ನಾಡು-ನುಡಿ, ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಸಾಹಿತ್ಯಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ನಾಡಿನ ಗೌರವ ಹೆಚ್ಚಿಸಿದೆ ಎಂದರು.
ಸಾಹಿತಿ ಎಸ್.ಎಸ್. ಸಾತಿಹಾಳ ಮಕ್ಕಳ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಗೋವಿನ ಹಾಡಿನಂತಹ ಅನೇಕ ಮೌಲಿಕ ಗೀತೆಗಳು, ಜನಪದದ ಹಿನ್ನೆಲೆಯಲ್ಲಿ ಹಲವಾರು ಪ್ರಮುಖ ಶಿಶುಗೀತೆಗಳಿದ್ದು, ಅವುಗಳನ್ನು ರಾಗಬದ್ಧವಾಗಿ ಹಾಡಿಸುವ ಮೂಲಕ ಮಕ್ಕಳ ಸಾಹಿತ್ಯ ಬೆಳೆಸೋಣ ಎಂದರು.
ಶಿಕ್ಷಕಿ ಶರಣಮ್ಮ ಹಾದಿಮನಿ ಶಿಕ್ಷಣದ ಮಹತ್ವ ಹಾಗೂ ನೀತಿ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. ಸುನಂದಾ ಕೋರಿ ಪ್ರಾರ್ಥಿಸಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ಮಾಡಿದರು. ಶಿಲ್ಪಾ ಭಸ್ಮೆ ಸ್ವಾಗತಿಸಿದರು. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಪರವೀನಬಾನು ಶೇಖ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಽಕಾರಿಗಳಾದ ಅಭಿಷೇಕ ಚಕ್ರವರ್ತಿ, ಜಯಶ್ರೀ ಹಿರೇಮಠ, ಜಗದೀಶ ಬೋಳಸೂರ, ಬಿ.ಎಂ. ಆಜೂರ, ಸುಖದೇವಿ ಅಲಬಾಳಮಳ, ಎ.ಎಂ. ಹಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಭಾಗೀರಥಿ ಸಿಂಧೆ, ಬಸವರಾಜ ಕೋನರಡ್ಡಿ, ಮಹಾದೇವಪ್ಪ ಮೋಪಗಾರ, ರಾಜೇಶ್ವರಿ ಮೋಪಗಾರ, ಮಹಾದೇವಿ ತೆಲಗಿ, ವಿಜಯಲಕ್ಷಿ÷್ಮÃ ಹಳಕಟ್ಟಿ, ಶಾರದಾ ಕೊಪ್ಪ, ಶ್ವೇತಾ ಬಿರಾದಾರ, ವಿಠ್ಠಲ ದೇವಣಗಾವಿ, ಜಿ.ಎಸ್. ಬಳ್ಳೂರ ಮತ್ತಿತರರಿದ್ದರು.