ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹರಕೆ ಹೊತ್ತು ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಕೈಕೊಂಡ ಸಾತಲಗಾಂವ ಗ್ರಾಮದ ಅಭಿಮಾನಿ ನಾಗಪ್ಪ ಬಮಗೊಂಡನನ್ನು ಬೀಳ್ಕೊಡುತ್ತಿರುವ ಗ್ರಾಮಸ್ಥರು. 
ವಿಜಯಪುರ

ಮರಗಾಲು ಕಟ್ಟಿಕೊಂಡು 500 ಕಿ.ಮೀ. ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಯತ್ನಾಳ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತ ಅಭಿಮಾನಿ
  • ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ತೆರಳಿದ ಸಾಹಸಿ
ಇಂಡಿ: ವಿಜಯಪುರದ ನಗರ ಶಾಸಕ ಬಸನಗೌಡ ಆರ್. ಪಾಟೀಲ (ಯತ್ನಾಳ) ಅವರು 2028ಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಹರಕೆ ಹೊತ್ತು ಸಾತಲಗಾಂವ ಪಿ.ಐ. ಗ್ರಾಮದಿಂದ ಸುಮಾರು 500 ಕಿ.ಮೀ. ದೂರದ ಆಂಧ್ರ ಪ್ರದೇಶದ ಶ್ರೀಶೈಲಂ ವರೆಗೆ ತನ್ನ ಎರಡೂ ಕಾಲಿಗೆ (ಮರಗಾಲು) ಕಟ್ಟಿಕೊಂಡು ಬಿ.ಆರ್. ಪಾಟೀಲ ಅಭಿಮಾನಿ ಓರ್ವ ಪಾದಯಾತ್ರೆ ಕೈಗೊಂಡಿದ್ದಾರೆ.
ತಾಲೂಕಿನ ಸಾತಲಗಾಂವ ಪಿ.ಐ. ಗ್ರಾಮದ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಬಮಗೊಂಡ ಎಂಬಾತನೇ ಪಾದಯಾತ್ರೆ ಕೈಗೊಂಡ ಅಭಿಮಾನಿ.
ದಾನಯ್ಯ ಮಠಪತಿ, ಗುಂಡುರಾವ ಮಡಗೊಂಡ, ಬಸವರಾಜ ಮಡಗೊಂಡ, ಸಂಗಣ್ಣ ಹೊಸುರ, ರಮೇಶ ಮಸಳಿ, ಸಾತಲಗಾಂವ ಪಿ.ಐ. ಗ್ರಾಮಸ್ಥರು ಪಾದಯಾತ್ರೆ ತೆರಳುವ ಯುವಕನಿಗೆ ಶುಭ ಹಾರೈಸಿ ಬೀಳ್ಕೊಟ್ಟರು.