ಹೊರ್ತಿ: ಸಮೀಪದ ಮರಗೂರ ಭೀಮಾಶಂಕರ ಸಹಕಾರಿ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರು ಹಮ್ಮಿಕೊಂಡಿದ್ದ ಹೋರಾಟ ಸ್ಥಳಕ್ಕೆ ಇಂಡಿ ಎಸಿ ಅನುರಾಧಾ ವಸöದ, ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ ಭೇಟಿ ನೀಡಿ ಹೋರಾಟ ಕೈ ಬಿಡುವಂತೆ ರೈತರ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.
ಕರ್ನಾಟಕ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ನಾಗನಾಥ ಬಿರಾದಾರ ಮಾತನಾಡಿ, ಭೀಮಾಶಂಕರ ಕಾರ್ಖಾನೆಯವರು ಮೊದಲು ರೈತರ ಕಬ್ಬಿಗೆ ಬೆಲೆ ನಿಗದಿಗೊಳಿಸಿ ಕಾರ್ಖಾನೆ ಆರಂಭಿಸಬೇಕು. ಹಳೆಯ ದರ ಮುಂದುವರಿಸಿ ಕಾರ್ಖಾನೆ ಆರಂಭಿಸಲು ಯತ್ನಿಸುವುದು ಖಂಡನೀಯ ಎಂದರು.
ರೈತ ಮುಖಂಡ ಬಿ. ಡಿ. ಪಾಟೀಲ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ರೈತನಿಗೆ ಬೆಂಬಲ ಬೆಲೆ ಸಿಗಬೇಕು. ರೈತರು ಇಂದು ಸಂಕಷ್ಟ ಅನುಭವಿಸುತ್ತಿದ್ದು, ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನ್ಯಾಯಯುತ ಬೆಲೆ ಸಿಗಬೇಕು ಎಂದರು.
ಮಹಾದೇವ ಭೈರಗೊಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಗದೇವ ಭೈರಗೊಂಡ, ಸುಭಾಷ ಭೈರಗೊಂಡ, ಶ್ರೀಶೈಲ ಬಿರಾದಾರ, ವಿಠ್ಠಲ ವಡಗಾಂವ, ಅಶೋಕ ಭೈರಗೊಂಡ, ಸುರೇಶ ಬಿರಾದಾರ, ಕಾಂತು ಭೈರಗೊಂಡ, ಅರುಣ ಡೊಳ್ಳಿ, ಸೈಯ್ಯದ್ ಬಂಡಿ, ರೇವಣ್ಣಸಿದ್ದ, ಯಾದವಾಡ, ಶಶಿಕಾಂತ ಬಿರಾದಾರ, ಸತೀಶ ಭೈರಮಡಿ, ಸಿದ್ದರಾಮ ಉಟಗಿ ಮತ್ತಿತರರಿದ್ದರು.
ವಿವಿಧ ಗ್ರಾಮಗಳಲ್ಲಿ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ಪಾಲ್ಗೊಂಡಿದ್ದರು.