ವಿಜಯಪುರ: ಕರೊನಾ ತಡೆಗೆ ಯುವ ಭಾರತ ಸಂಘಟನೆ ಪದಾಧಿಕಾರಿಗಳು ಫೇಸ್‌ಸೀಲ್ಡ್ ಮಾಸ್ಕ್ ತಯಾರಿಸಿ ಗುರುವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ವಿತರಿಸಿದರು.
ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಅವರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮಾಸ್ಕ್ ವಿತರಿಸಿ ಮಾತನಾಡಿ, ನಮ್ಮ ಸಂಘಟನೆ ಕಾರ್ಯಕರ್ತರೊಂದಿಗೆ ಚರ್ಚಿಸಿ, ಅತಿ ಕಡಿಮೆ ಬೆಲೆಯಲ್ಲಿ (ಕೇವಲ 30 ರೂ.ಗೆ) ಫೇಸ್‌ಸೀಲ್ಡ್ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಈ ಮಾಸ್ಕ್ ಕರೊನಾ ರೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಆರೋಗ್ಯ, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಅಗತ್ಯವಿರುವವರೆಲ್ಲರೂ ಬಳಸಬಹುದು ಎಂದು ಹೇಳಿದರು.
ಇಂಥ ಮಾಸ್ಕ್‌ಗಳ ಅವಶ್ಯಕತೆ ಹೆಚ್ಚಾಗಿದ್ದು, ಅದರ ಪೂರೈಕೆ ಕಡಿಮೆಯಾಗಿರುವುದರಿಂದ ತಾವು ಕಾರ್ಯಕರ್ತರೊಡಗೂಡಿ 1ಸಾವಿರ ಮಾಸ್ಕ್‌ಗಳನ್ನು ತಯಾರಿಸಿ ಕೊಡುವ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ, ಸಂಘಟನೆ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸತೀಶ ಬಾಗಿ ಹಾಗೂ ಮತ್ತಿತರರು ಇದ್ದರು.