ಜಿಲ್ಲೆ

VIDEO| ಟಿಕ್​ಟಾಕ್​ಗೆ ಗುಡ್​ಬೈ ಹೇಳುವ ನಿರ್ಧಾರದೊಂದಿಗೆ ಯುವಕರಿಂದ ಮತ್ತೊಂದು ದಿಟ್ಟ ಹೆಜ್ಜೆ!

ವಿಜಯಪುರ: ಭಾರತದ ವೈರಿ ಚೀನಾ ವಿರುದ್ಧ ಗುಮ್ಮಟನಗರಿಯ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು, ಚೀನಾ ನಿರ್ಮಿತ ಟಿಕ್​ಟಾಕ್​ ಆ್ಯಪ್​ ಖಾತೆಯನ್ನು ರದ್ದು ಮಾಡಲು ನಿರ್ಧಾರ ಮಾಡಿದ್ದಾರೆ.

ಪ್ರಕಾಶ್ ಆರ್.ಕೆ, ವಿಕಾಸ್ ಕೆ, ಶ್ರೀಶೈಲ್ ಸೇರಿದಂತೆ 15ಕ್ಕೂ ಅಧಿಕ ಯುವಕರು ಇಂದು ಸಂಜೆ ಚೀನಿ ಆ್ಯಪ್​ ಅನ್​ ಇನ್​ಸ್ಟಾಲ್​ ಮಾಡಲು ನಿರ್ಧಾರಿಸಿದ್ದು, ಚೀನಾ ಮೂಲದ ಸೋಶಿಯಲ್ ಅಪ್ಲಿಕೇಶನ್ ಬಳಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ವಿಜಯಪುರದ ಗಾನಯೋಗಿ ಕಲಾ ಸಂಘದ ಕಲಾವಿದರು ಇವರಿಗೆ ಸಾಥ್ ನೀಡಿದ್ದಾರೆ.

ಇನ್ಮುಂದೆ ತಮ್ಮ ಕಲೆಯನ್ನು ಭಾರತೀಯ ಸೋಶಿಯಲ್ ಆ್ಯಪ್​ಗಳಲ್ಲಿ ಮುಂದುವರೆಸಲು ವಾಗ್ದಾನ ಮಾಡಿರುವ ಕಲಾವಿದರು, ಚೀನಿ ಅಪ್ಲಿಕೇಶನ್ ಹಾಗೂ ಭಾರತೀಯ ಅಪ್ಲಿಕೇಶನ್ ಯಾವುವು ಎನ್ನುವ ಬಗ್ಗೆಯು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಗೆ ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಪ್ರಿಯಕರನಿಗೆ ವಿಡಿಯೋ ವಾಟ್ಸ್​ಆ್ಯಪ್​ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ