ವಿಜಯಪುರ: ಶತಮಾನ ಕಂಡ ಸಹಕಾರಿ ಬ್ಯಾಂಕ್‌ಗಳಲ್ಲಿ ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಕೂಡ ಒಂದು. ದೇಶ ಹಾಗೂ ರಾಜ್ಯದಲ್ಲಿ ಅನೇಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಹಾಗೂ ಬ್ಯಾಂಕು ಸಹಾಯಹಸ್ತ ಚಾಚಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀಹರ್ಷ ಪಾಟೀಲ ಹೇಳಿದರು.
ಸೋಮವಾರ ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಸಿಬ್ಬಂದಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 7.5 ಲಕ್ಷ ರೂ. ಸಹಾಯಧನ ನೀಡಿ ಅವರು ಮಾತನಾಡಿದರು.
ಮಹಾಮಾರಿ ಕರೊನಾದಂಥ ಸಂಕಷ್ಟದ ಸಮಯದಲ್ಲಿ ಪರಿಹಾರಾರ್ಥ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನಿಂದ 5 ಲಕ್ಷ ರೂ.ಹಾಗೂ ಸಿಬ್ಬಂದಿ ಒಂದು ದಿನದ ವೇತನದಿಂದ 2.5 ಲಕ್ಷ ರೂ. ಒಟ್ಟು 7.50ಲಕ್ಷ ರೂ. ಪೇ ಆರ್ಡರ್‌ನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಬ್ಯಾಂಕಿನ ಅಧ್ಯಕ್ಷ ಶ್ರೀಹರ್ಷ ಪಾಟೀಲ ನೀಡಿದರು. ಬ್ಯಾಂಕಿನ ಉಪಾಧ್ಯಕ್ಷ ರಮೇಶ ಬಿದನೂರ, ನಿರ್ದೇಕರಾದ ಗುರು ಗಚ್ಚಿನಮಠ, ಆರ್.ಎಂ. ಪಾಟೀಲ, ಡಾ.ವಿ.ಎನ್. ಪಾಟೀಲ, ವಿ.ಆರ್.ಅವರಂಗಾಬಾದ್, ವಿ.ಎಸ್. ಪಾಟೀಲ, ಎಸ್.ಎಸ್. ಜತ್ತಿ, ವಿ.ಡಿ. ಕರ್ಪೂರಮಠ, ಆರ್. ಎಸ್. ಬಿಜ್ಜರಗಿ, ಎಸ್.ಎಸ್. ಪಾಟೀಲ, ಪ್ರಕಾಶ ಬಗಲಿ, ಜಿ.ಎಸ್. ಗಂಗನಳ್ಳಿ, ಎಸ್.ಎಸ್. ಭೋವಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎಲ್. ಇಂಡಿ ಹಾಗೂ ಹಿರಿಯ ಅಧಿಕಾರಿ ಸಿ.ಜಿ. ಹಳ್ಳದ ಉಪಸ್ಥಿತರಿದ್ದರು.