ಜಿಲ್ಲೆ

ವ್ಯಕ್ತಿತ್ವ ವಿಕಾಸಕ್ಕೆ ಧೈರ್ಯ,ಸಹನೆ ಅಗತ್ಯ

ವಿಜಯಪುರ: ರಾಮಕೃಷ್ಣ ಪರಮಹಂಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಎಂ.ಎನ್. ವಾಲಿ ಹೇಳಿದರು.
ನಗರದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಮಕೃಷ್ಣ ಪರಮಹಂಸರ 185ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪರಮಹಂಸರ ಧೈರ್ಯ, ಸಹನೆ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಆದರ್ಶಗಳನ್ನು ಮಕ್ಕಳು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
2019-20ನೇ ಸಾಲಿನ ವಾರ್ಷಿಕ ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಸಂಸ್ಥೆ ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯ ಶಿಕ್ಷಕಿ ನೀಲಮ್ಮ ಪೂಜಾರಿ, ಗಣೇಶ ರೇಡೆ, ಮೌನೇಶ್ವರ ಕಠ್ಠಾಣಿ, ಡಾ. ಶಿವಲೀಲಾ ಪೂಜಾರಿ, ಬೊಧಕ, ಬೊಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.