ಜಿಲ್ಲೆ

ಬಿಜೆಪಿಯಿಂದ ಕರೊನಾ ಜಾಗೃತಿ ಅಭಿಯಾನ

ವಿಜಯಪುರ: ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಮಂಗಳವಾರ ಬಿಜೆಪಿ ನಗರ ಘಟಕದಿಂದ ಕರೊನಾ ವಿರುದ್ದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರ ಅಧ್ಯಕ್ಷ ಮಳುಗೌಡ ಪಾಟೀಲ ಮಾತನಾಡಿ, ಕರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆದುಕೊಳ್ಳಬೇಕು. ಕರೊನಾ ತೊಲಗಿಸಲು ಜನರು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾಂವ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಭೀಮಾಶಂಕರ ಹದನೂರ, ವಿವೇಕ ಹರಿಕಾರ, ಪಾಪುಸಿಂಗ್ ರಜಪೂತ, ಭರತ ಕೋಳಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಸತೀಶ ಪಾಟೀಲ, ಕಾಂತು ಶಿಂದೆ, ವಿಠಲ ನಡುವಿನಕೇರಿ, ಸದಾಶಿವ ಬುಟಾಳೆ, ರಾಹುಲ ಜಾಧವ, ಅಲ್ತಾಪ ಇಟಗಿ, ವಿನಾಯಕ ದಹಿಂಡೆ, ಸಿದ್ದು ಮಲ್ಲಿಕಾರ್ಜುನ ಮಠ, ಬಸವರಾಜ ಬೈಚಬಾಳ, ಪ್ರಶಾಂತ ರಾವ್ ಮತ್ತಿತರರಿದ್ದರು.