ವಿಜಯಪುರ: ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಗಜಾನನ ಉತ್ಸವ ಮಹಾಮಂಡಳಿಯಿಂದ ಪ್ರತಿಷ್ಠಾಪಿಸಿದ ಗಜಾನನ ಮೂರ್ತಿಗೆ ಶುಕ್ರವಾರ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಔಪಚಾರಿಕವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರವನ್ನು ಉಳಿಸುವ ಜವಾಬ್ದಾರಿ ಕೇವಲ ಸರ್ಕಾರದ್ದಲ್ಲ, ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕೆಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಗೋಪಾಲ ಗಟಕಾಂಬಳೆ, ಶಿವಾಜಿ ಪಾಟೀಲ, ಭೀಮಾಶಂಕರ ಹದನೂರ, ಮಹೇಶ ಕುಂಬಾರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಾನಕರ, ಮಹೇಶ ಜಾಧವ, ಸಿದ್ದು ಮಲ್ಲಿಕಾರ್ಜುನಮಠ, ವಿಜು ಶಾಪೇಟಿ, ಆನಂದ ಮುಚ್ಚಂಡಿ, ಚಂದು ಉಮರ್ಜಿ, ವಿಜಯ ಜೋಶಿ, ಪ್ರಭಾಕರ ಭೊಸ್ಲೆ, ರಾಕೇಶ ಕುಲಕರ್ಣಿ, ವಿಠಲ ನಡುವಿನಕೇರಿ, ರಾಜು ಸೂರ್ಯವಂಶಿ, ರವಿ ಮೂಖರ್ತಿಹಾಳ, ಸಚಿನ ಅಡಕಿ ಮತ್ತಿತರರಿದ್ದರು.