ಜಿಲ್ಲೆ

ಗಜಾನನ ಉತ್ಸವ ಹಿನ್ನೆಲೆ ಸಸಿ ನೆಟ್ಟ ಶಾಸಕ ಪಾಟೀಲ

ವಿಜಯಪುರ: ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಗಜಾನನ ಉತ್ಸವ ಮಹಾಮಂಡಳಿ ಪ್ರತಿಷ್ಠಾಪಿಸಿದ ಗಜಾನನ ಮೂರ್ತಿಗೆ ಶಾಸಕ ಎಂ.ಬಿ. ಪಾಟೀಲ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಕೋಟಿ ವೃಕ್ಷ ಅಭಿಯಾನದಡಿ ಸಸಿ ನೆಟ್ಟರು.
ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹಿಂದೆಂದಿಗಿಂತಲೂ ಈಗ ಹೆಚ್ಚು ಮಹತ್ವ ಪಡೆದಿದೆ. ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ ಮರಗಳನ್ನಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಗಜಾನನ ಉತ್ಸವ ಮಹಾಮಂಡಳಿಯವರು ಪ್ರತಿ ವರ್ಷ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅದೇ ರೀತಿ ಈ ವರ್ಷ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಮುಖಂಡರಾದ ಗೋಪಾಲ ಘಟಕಾಂಬಳೆ, ಶಿವಾಜಿ ಪಾಟೀಲ, ಭೀಮಾಶಂಕರ ಹದನೂರ, ಮಹೇಶ ಕುಂಬಾರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಾನಕರ, ಮಹೇಶ ಜಾಧವ, ಮುರುಗೇಶ ಪಟ್ಟಣಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ, ವಿಜು ಶಾಪೇಟಿ, ಆನಂದ ಮುಚ್ಚಂಡಿ, ಚಂದು ಉಮರ್ಜಿ, ಪ್ರಭಾಕರ ಭೋಸ್ಲೆ ಮತ್ತಿತರರಿದ್ದರು.