ಜಿಲ್ಲೆ

ಹದಗೆಟ್ಟ ರಸ್ತೆಗಳ ಅಭಿವೃದ್ಧಿ

ವಿಜಯಪುರ: ನಗರದಲ್ಲಿ ಮಳೆಯಿಂದ ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಜನತೆ ಬೀದಿ ದೀಪ ಅಳವಡಿಸಿ ಎರಡೂ ಬದಿಯ ರಸ್ತೆಗಳನ್ನು ಸೌಂದರ್ಯ ವೃದ್ಧಿಗೊಳಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.22ರ ಸಂಗೊಳ್ಳಿ ರಾಯಣ್ಣ ಕಾಲನಿಯಲ್ಲಿ ಮಹಾನಗರ ಪಾಲಿಕೆಯಿಂದ ಮಂಜೂರಾದ 29.67 ಲಕ್ಷ ರೂ. ಮೊತ್ತದ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಪಿಆರ್‌ಎಎಂಸಿ ವಿಭಾಗದಿಂದ ಮಂಜೂರಾದ 4 ಕೋಟಿ ರೂ. ವೆಚ್ಚದಲ್ಲಿ ವಲ್ಲಭಭಾಯಿ ಪಟೇಲ್ ವೃತ್ತದ ಜಂಕ್ಷನ್ ಸುಧಾರಣೆ ಕಾಮಗಾರಿ ಜತೆಗೆ ಬಬಲೇಶ್ವರ ನಾಕಾವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸರೋಜಿನಿ ಚೌಧರಿ, ಗುರು ಕೌಲಗಿ, ಗುರು ಗಚ್ಚಿನಮಠ, ಸಂತೋಷ ಪಾಟೀಲ, ಶಂಕರ ಹೂಗಾರ, ಸಿದ್ದನಗೌಡ ಬಿರಾದಾರ, ಮಡಿವಾಳ ಯಳವಾರ, ಬಸವರಾಜ ಗೊಳಸಂಗಿ, ಚಂದ್ರು ಚೌಧರಿ, ಪಾಂಡುಸಾಹುಕಾರ ದೊಡ್ಡಮನಿ, ರಾಜು ಗಣಿ, ಶರಣು ಕಾಖಂಡಕಿ, ವೀರೇಶ ವಾಲಿಕಾರ, ತಳಕೇರಿ, ಬಸವರಾಜ ಬಿರಾದಾರ ಇತರರಿದ್ದರು.