ಜಿಲ್ಲೆ

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ರವಾನೆ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂಗವಾಗಿ ಬಿಜೆಪಿ ನಗರ ಮಂಡಲದಿಂದ ಮಂಗಳವಾರ ವಾರ್ಡ್ ನಂ.31ರಲ್ಲಿ ಪೋಸ್ಟ್‌ಕಾರ್ಡ್ ಮೂಲಕ ಶುಭ ಸಂದೇಶ ಕಳುಹಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ ಆಗಿ ಹೊರಹೊಮ್ಮಿದ್ದಾರೆ. ಅವರ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ. ಇಂಥ ನಾಯಕರನ್ನು ಪಡೆದಿದ್ದು ನಮ್ಮ ಭಾಗ್ಯ. ಅವರ ಜನ್ಮದಿನದ ಹಿನ್ನೆಲೆ ಪೋಸ್ಟ್‌ಕಾರ್ಡ್ ಮೂಲಕ ಅವರಿಗೆ ಶುಭಾಶಯ ತಿಳಿಸಲಾಗುತ್ತಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ಮಳುಗೌಡ ಪಾಟೀಲ, ರಾಜು ಮಗಿಮಠ, ಮಲ್ಲಮ್ಮ ಜೋಗೂರ, ರವಿ ಬಗಲಿ, ಅನುರಾಧಾ ಕಲಾಲ, ಗೋಪಾಲ ಘಟಕಾಂಬ್ಳೆ, ಅಲ್ತಾಫ್ ಇಟಗಿ, ಪಾಪುಸಿಂಗ್ ರಜಪೂತ, ಭರತ್ ಕೋಳಿ, ಸತೀಶ ಡೋಬಳೆ, ಶ್ರೀಕಾಂತ ಶಿಂಧೆ, ರಾಜಶೇಖರ ತಾಳಿಕೋಟಿ, ವಿನಾಯಕ ದಹಿಂಡೆ, ಸಂಪತ್ ಕೊವಳ್ಳಿ, ರಾಜೇಂದ್ರ ವಾಲಿ ಮತ್ತಿತರರಿದ್ದರು.