ವಿಜಯಪುರ: ಬಡವರ ಸೇವೆಯೇ ನಿಜವಾದ ದೇವರ ಸೇವೆ ಎಂದು ಲಯನ್ಸ್ ಕ್ಲಬ್ ಆ್ ವಿಜಯಪುರ ಪರಿವಾರದ ಜೋನ್ ಚೇರ್ ಪರ್ಸನ್ ಪ್ರೊ. ಎಸ್.ಎಸ್. ರಾಜಮಾನೆ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ‘ಜೂನ್ ಮೀಟ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವರ ಸೇವೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ನಮ್ಮ ಸಂಸ್ಥೆಯು ಅಂತರ ರಾಷ್ಟ್ರಮಟ್ಟದ್ದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಶೇಷವಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಡವರಿಗೆ ಸಹಾಯ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಾಗ ಮಾತ್ರ ಸಂಸ್ಥೆ ಏಳ್ಗೆಯಾಗುವುದು ಎಂದರು.
ಐ.ಬಿ. ಬಿರಾದಾರ, ಎಂ.ಎಸ್. ಬಿರಾದಾರ, ಶ್ರವಣಕುಮಾರ ಮಹೇಂದ್ರಕರ, ರಾಜೇಶ ಗಾಯಕವಾಡ, ಜಯಶ್ರೀ ಲದ್ವಾ, ಬಿ.ಎನ್. ಬಿರಾದಾರ, ಎಂ.ಬಿ. ರಜಪೂತ, ಎಚ್.ಎ. ಕಲಾದಗಿ, ಎಂ.ಆರ್. ಪೂಜಾರಿ, ಕೆ.ಆರ್. ಲಮಾಣಿ, ಶಿವಾನಂದ ಚಾಳಿಕರ, ನೆಹರು ಪೋರವಾಲ್, ಕೆ.ಎಚ್. ಸೋಮಾಪುರ, ಬಸವರಾಜ ಬಿ.ಕೆ. ಮತ್ತಿತರರಿದ್ದರು. ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಅಧ್ಯಕ್ಷ ಯಾಜ ಕಲಾದಗಿ ಸ್ವಾಗತಿಸಿದರು. ಡಾ. ಅಶೋಕ ಜಾಧವ ನಿರೂಪಿಸಿದರು. ಡಾ. ಬಿ.ಎಂ. ಬಿರಾದಾರ ವಂದಿಸಿದರು.