ವಿಜಯಪುರ: ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ ಎಂದು ಸುವಿಧಾ ಸಾಮಾಜಿಕ ಸಂಸ್ಥೆ ಅಧ್ಯಕ್ಷ ಫಯಾಜ್ ಕಲಾದಗಿ ಹೇಳಿದರು.
ನಗರದ ಜಿಪಂ ಆವರಣದಲ್ಲಿ ಕೊಹಿನೂರ್ ಕ್ರಿಕೆಟ್ ಕ್ಲಬ್ ಹಾಗೂ ಕರ್ನಾಟಕ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಅಂಡರ್ 14, 16, 19 ಲೆದರ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತರಾಗಿರಲು ಆಹಾರ, ನೀರು , ವಸತಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ ಕೂಡ. ಆಟ-ಪಾಠ, ಯೋಗಾಸನಗಳು, ವಾಯುವಿಹಾರ, ವ್ಯಾಯಾಮಗಳು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗಗೆ ಅವಶ್ಯಕವಾಗಿವೆ ಎಂದರು.
ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ಮಾತನಾಡಿ, ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಬೇಕು. ಸೋಲು-ಗೆಲುವಿಗಿಂತ ಭಾಗವಹಿಸುವಿಕೆಯೇ ಪ್ರಮುಖವಾದದ್ದು ಎಂದರು.
ಐ.ಸಿ.ಪಠಾಣ, ಪ್ರಶಾಂತ ಹಜೇರಿ, ಸಲೀಮ್ ಬೇಪಾರಿ, ಎಂ.ಎಂ.ಮಮದಾಪುರ, ಜಿ.ಎಂ.ಬೋಸಲೆ, ಗೌಸ್ ತುರ್ಕಿ, ಚಾಂದ ಮೊಕಾದಾಮ, ಸಚಿನ್ ರಾಠೋಡ, ಜಾಹಿದ್ ತಾವಿಲ್ದಾರ್, ರಾಜು ಭಜಂತ್ರಿ, ಸ್ನೇಹಾ ಕಲಾಲ, ಸಿರಿನ ಜಾಗೀರದಾರ ಮತ್ತಿತರರಿದ್ದರು.