ಜಿಲ್ಲೆ

VIDEO| ಕರೊನಾ ಭೀತಿ: ವಿಜಯಪುರ-ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಸಂಪೂರ್ಣ ಬಂದ್​

ವಿಜಯಪುರ: ಕರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕ ಲಾಕ್​ಡೌನ್​ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ-ಕಲಬುರಗಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಸೇತುವೆಯ ಮುಂಭಾಗದಲ್ಲಿ ಮಣ್ಣಿನ ಗುಡ್ಡೆ ಹಾಗೂ ಮುಳ್ಳಿನ ರಾಶಿ ಹಚ್ಚಿ ರಸ್ತೆಯನ್ನು ಮುಚ್ಚಲಾಗಿದೆ. ವಿಜಯಪುರ ಜಿಲ್ಲೆ ಹಾಗೂ ಕಲಬುರಗಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸೇತುವೆಯು ವಿಜಯಪುರದ ಇಂಡಿ ತಾಲ್ಲೂಕಿನ ‌ಚಿಕ್ಕ ಮಣ್ಣೂರ್ ಹಾಗೂ ಕಲಬುರಗಿಯ ಅಫಜಲ್​ಪುರ ತಾಲ್ಲೂಕಿನ ಹಿರೆಮಣ್ಣೂರ ಮಧ್ಯೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಅಧಿಕಾರಿಗಳು ಜೆಸಿಬಿ ಮೂಲಕ ರಸ್ತೆಯನ್ನು ಬಂದ್ ಮಾಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಜನರು ಕಲಬುರಗಿಗೆ ತೆರಳದಂತೆ ಹಾಗೂ ಕಲಬುರಗಿ ಜಿಲ್ಲೆಯ ಜನರು‌ ವಿಜಯಪುರ ಜಿಲ್ಲೆಗೆ ಆಗಮಿಸದಂತೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.